ದುಷ್ಕರ್ಮಿಗಳು ಬಿಜೆಪಿ ಕಾರ್ಯಕರ್ತನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಕೂಚ್‌ಬೆಹರ್ ಪ್ರದೇಶದ ಚುನಾವಣಾRX ಕೇಂದ್ರದ ಬಾಗಿಲಲ್ಲೇ ಆತನಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಇಂದಿನಿಂದ ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆ ಆರಂಭಗೊಂಡಿದ್ದು, ಹಿಂಸಾಚಾರವೂ ಸಹ ಆರಂಭಗೊಂಡಿದೆ. ಮೃತನನ್ನು ಬಿಜೆಪಿ ಪೋಲಿಂಗ್ ಏಜೆಂಟ್ ಮದ್ದಾಬ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಆತನ ತಲೆಗೆ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.ಸದ್ಯ ಈ ಪ್ರದೇಶದಲ್ಲಿ ಮತದಾನ ರದ್ದುಗೊಂಡಿದೆ