ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಇಂದಿನಿಂದ 5 ಕೆ.ಜಿ ಅಕ್ಕಿಯ ಹಣ ವರ್ಗಾವಣೆಯಾಗಲಿದೆ. ಆದರೆ, ಕೆಲವೊಂದು ಕಾರಣಗಳಿಂದ ಎಲ್ಲರಿಗೆ ಹಣ ಸಿಗದೇ ಇರಬಹುದು. ಆ ಕಾರಣಗಳು ಈ ರೀತಿಯಿದೆ.1.ಪಡಿತರ ಪಡೆಯುವ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರು ಇದ್ದರೆ, ಆ ಕುಟುಂಬದ ಮುಖ್ಯಸ್ಥರು ಯಾರೂ ಎಂಬುವುದು ಇತ್ಯರ್ಥವಾಗದೇ ಹಣ ಸಿಗುವುದಿಲ್ಲ. 2. ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದಲ್ಲಿ 3 ಅಥವಾ 3ಕ್ಕಿಂತ ಕಡಿಮೆ ಸದಸ್ಯರಿದ್ದರೆ ಹಣ ದೊರೆಯುವುದಿಲ್ಲ. ಕಾರಣ ಅವರು ಈಗಾಗಲೇ 30 ಕೆ.ಜಿ ಅಕ್ಕಿ ಪಡೆಯುತ್ತಿರುತ್ತಾರೆ. 3. ಕಳೆದ ಮೂರು ತಿಂಗಳಿನಿಂದ ನೀವು ನ್ಯಾಯಬೆಲೆ ಅಂಗಡಿಯಿಂದ ಅಕ್ಕಿಪಡೆದುಕೊಂಡಿಲ್ಲವಿದ್ದರೆ ಅಕ್ಕಿಯಬದಲಾಗಿ ಹಣ ಸಿಗುವುದಿಲ.