ಚಿಕ್ಕಮಗಳೂರಿನ ಕಟ್ಟೆಮನೆ ಗ್ರಾಮದಲ್ಲಿ ಡಿಶ್ ರಿಪೇರಿ ಮಾಡುವವನು ಮಹಿಳೆಯರಿಗೆ ತನ್ನ ಮೊಬೈಲ್ ನಂಬರ್ ಕೊಡುವ ವೇಳೆ ಏನಾದರೂ ಸಮಸ್ಯೆ ಇದ್ದರೆ ಕರೆ ಮಾಡಿ ಎಂದು ಹೇಳುತ್ತಿದ್ದ. ಆಮೇಲೆ ಮಹಿಳೆಯರಿಗೆ ಕಾಲ್ ಮಾಡಿ ಪೀಡಿಸುತ್ತಿದ್ದ. ಪದೇ ಪದೇ ತನಗೆ ಕರೆ ಮಾಡುವಂತೆ ಹೇಳಿ ಮಹಿಳೆಯರಿಗೆ ಪೀಡಿಸುತ್ತಿದ್ದವನಿಗೆ ಇಂದು ಊರಿನವರು ಅಟ್ಟಾಡಿಸಿಕೊಂಡು ಹೊಡೆದ ಘಟನೆ ನಡೆದಿದೆ.