ದೇವರಹಳ್ಳಿ- ಏನೆಕಲ್ಲು ಸಂಚಾರ ಬಂದ್

ಭಾರೀ ಮಳೆ ಮುಂದುವರಿದಿದ್ದು ಸುಬ್ರಹ್ಮಣ್ಯ ಸಮೀಪದ ಕಲ್ಲಾಜೆ ಹೊಳೆಯ ನೆರೆ ನೀರು ಹೊಳೆ ಬದಿಯ ತೋಟಗಳಿಗೆ ನುಗ್ಗಿದ್ದು, ಮನೆಗಳಿಗೂ ನುಗ್ಗುವ ಭೀತಿ ಉಂಟಾಗಿದೆ. ದೇವರಹಳ್ಳಿ- ಏನೆಕಲ್ಲು ಸಂಚಾರವು ಬಂದ್ ಆಗಿದೆ.ಕಲ್ಲಾಜೆ ಹೊಳೆಯಲ್ಲಿ ಹೂಳು ತುಂಬಿರುವುದರಿಂದ ನೀರಿನ ಸರಾಗ ಹರಿವಿಗೆ ತಡೆಯಾಗಿ ನೀರು ನುಗ್ಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಲೋಕೇಶ್, ಮಹೇಶ್ , ಯಶೋಧರ ಮಾಣಿಬೈಲು, ರಾಘವ ಮಾಣಿಬೈಲು ಮೊದಲಾದವರ ಕೃಷಿ ತೋಟ ಜಲಾವೃತಗೊಂಡಿದೆ. ಯಶೋಧರ ಹಾಗೂ ಚಂದ್ರಕಲಾ ಎಂಬರ ಮನೆಗೆ ನೀರು ಆವರಿಸುವ ಬೀತಿ ಎದುರಾಗಿದೆ. ಕಳೆದ ವರ್ಷವೂ ಈ ಭಾಗದಲ್ಲಿ ತೋಟಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿತ್ತು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top