ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವಾರ್ಷಿಕ ಮಹಾ ಸಭೆ ಹಾಗೂ ಗಾಣಿಗ ಸಮ್ಮಿಲನ ಕಾರ್ಯಕ್ರಮ ಅ.1ರಂದು ಕೇರ್ಪಳ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ ಸಂಘದ ವಾರ್ಷಿಕ ಮಹಾಸಭೆಯು ಚಂದ್ರಶೇಖರ ಉದ್ದಂತಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ
ಹಿರಿಯರಾದ ಶಂಕರ ಪಾಟಾಳಿ ಪರಿವಾರಕಾನ, ಅಪ್ಪು ಮಾಸ್ತರ್ ಜಯನಗರ, ಮಹಾಲಿಂಗ ದೇರೆಬೈಲು, ಚಂದ ಕುಡೆಕಲ್ಲು, ಆಂತರಿಕ ಲೆಕ್ಕ ಪರಿಶೋಧಕ ಮಹಾಲಿಂಗನ್ ಬಾಜರ್ತೊಟ್ಟಿ ಉಪಸ್ಥಿತರಿರುವರು.ಈ ಸಂದರ್ಭದಲ್ಲಿ ಆರೋಗ್ಯ ನಿಧಿ ಹಾಗೂ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು.ಮುಂದಿನ ಅವಧಿಗೆ ನೂತನ ಸಮಿತಿಯ ರಚನೆ ಮಾಡಲಾಗುವುದು.
ಸಮ್ಮಿಲನ ಕಾರ್ಯಕ್ರಮ:
ಬೆಳಗ್ಗೆ ಗಂಟೆ 10ರಿಂದ ಗಾಣಿಗ ಸಮ್ಮಿಲನ ನಡೆಯಲಿದೆ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸುವರು. ಬೆಂಗಳೂರು ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಶ್ರೀ ಪೂರ್ಣಾನಂದ ಪುರಿ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಚಂದ್ರಶೇಖರ ಉದ್ದಂತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್, ಮಾಜಿ ಸ್ಪೀಕರ್ ಸುದರ್ಶನ್, ಬೆಂಗಳೂರು ಗಾಣಿಗ ಸಂಘದ ಉಪಾಧ್ಯಕ್ಷ ಅಂಕ ಶೆಟ್ಟಿ, ಗಾಣಿಗ ಸಂಘ ಜಿಲ್ಲಾಧ್ಯಕ್ಷ ವಿಶ್ವಾಸ್ ದಾಸ್ , ಸ್ವಾಗತ ಸಮಿತಿ ಸಂಚಾಲಕ ಶಂಕರ ಪಾಟಾಳಿ ಪರಿವಾರಕಾನ, ಪುತ್ತೂರು ಸ.ಪ್ರ.ಕಾಲೇಜಿನ ಪ್ರಾಂಶುಪಾಲ ಅಪ್ಪು ಪಾಟಾಳಿ ಜಯನಗರ, ನಿವೃತ್ತ ಉಪ ತಹಶೀಲ್ದಾರ್ ಮಹಾಲಿಂಗ ದೇರೆಬೈಲು, ಪೆರ್ಣೆ ಭಗವತಿ ಕ್ಷೇತ್ರದ ಅರಣಿಕ ಚಂದ ಕುಡೆಕಲ್ಲು, ಸಂಘದ ಆಂತರಿಕ ಲೆಕ್ಕ ಪರಿಶೋಧಕ ಮಹಾಲಿಂಗನ್ ಬಾಜರ್ತೊಟ್ಟಿ, ಸ್ವಿಗ್ಗಿ ಇಂಡಿಯಾ ನಿರ್ದೇಶಕ ಪ್ರೀತಮ್ ಕೆ ಎಸ್, ಚಾರ್ಟೆಡ್ ಅಕೌಂಟ್ ದಯಾನಂದ ಕೆ, ಮಂಗಳೂರು ವಾಣಿಯ ಗಾಣಿಗ ಸಂಘದ ಅಧ್ಯಕ್ಷ ರಾಮ ಮುಗ್ರೋಡಿ, ಪುತ್ತೂರು ಅಧ್ಯಕ್ಷ ಪ್ರಸಾದ್ ಬಾಕಿಮಾರ್, ವಿಟ್ಲ ಅಧ್ಯಕ್ಷ ಉದಯ ದಂಬೆ, ಈಶ್ವರಮಂಗಲ ಅಧ್ಯಕ್ಷ ಮಹಾಲಿಂಗ ಈಶ್ವರಮಂಗಲ ರವರು ಭಾಗವಹಿಸುವರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು. ಅಪರಾಹ್ನ ಗಂಟೆ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಜಾನನ ನಾಟ್ಯಾಂಜಲಿ ಸುಜಾತ ಕಲಾ ಕ್ಷೇತ್ರ ಮುಳ್ಳೇರಿಯ ಇವರಶಿಷ್ಯವೃಂದ ದವರಿಂದ ‘ನೃತ್ಯ ಶಿಲ್ಪಂ’ ನಡೆಯಲಿದೆ ಎಂದು ಅವರು ತಿಳಿಸಿದರು.
ಸುಳ್ಯದಲ್ಲಿ ಪ್ರಥಮ ರಾಜ್ಯ ಮಟ್ಟದ ಸಮಾಜ ಬಾಂಧವರು ಭಾಗವಹಿಸುವ ಗಾಣಿಗ ಸಮ್ಮಿಲನ ಆಯೋಜಿಸಲಾಗಿದೆ. ಜಿಲ್ಲೆ ಮತ್ತು ರಾಜ್ಯದ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಕೇರಳ ರಾಜ್ಯದಿಂದ ಸಮಾಜ ಬಾಂಧವರು ಪಾಲ್ಗೊಳ್ಳುವ ನೀರಿಕ್ಷೆ ಇದೆ. ಸಮಾಜ ಬಾಂಧವರನ್ನು ಒಟ್ಟು ಸೇರಿಸಿಕೊಳ್ಳುವುದು ಸಮ್ಮಿಲನದ ಉದ್ದೇಶವಾಗಿದೆ. ಸಮಾಜ ಬಾಂಧವರಿಗೆ ಸರಕಾರದ ಮಟ್ಟದಲ್ಲಿ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಸಂಘದ ವತಿಯಿಂದ ಮನವಿ ನೀಡಲಾಗಿದೆ. ಸಂಘದ ವತಿಯಿಂದ ವಿದ್ಯಾನಿಧಿ, ಆರೋಗ್ಯ ನಿಧಿ ಮತ್ತು ಪ್ರತಿಭಾ ಪುರಸ್ಕಾರ ನೀಡಲಾಗುವುದು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಹಿರಿಯ ಕಿರಿಯ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ವಿವರ ನೀಡಿದರು.
ಸಮ್ಮಿಲನ ಕಾರ್ಯಕ್ರಮದ ಪೂರ್ವಭಾವಿಯಾಗಿ ಸೆ.24ರಂದು ಸಮಾಜ ಬಾಂಧವರಿಗೆ ಕ್ರೀಡೋತ್ಸವ ಭಕ್ತಿ ಗೀತೆ ಸ್ಪರ್ಧೆಗಳನ್ನು ಸುಳ್ಯ ಸತಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಸಂಚಾಲಕ ಶಂಕರಪಾಟಾಳಿ ಪರಿವಾರಕಾನ, ಕಾರ್ಯದರ್ಶಿ ಸುರೇಶ್ ಕರ್ಲಪಾಡಿ, ಕೋಶಾಧಿಕಾರಿ ಗೋಪಾಲಕೃಷ್ಣ ಮೊರಂಗಲ್ಲು, ಆರ್ಥಿಕ ಸಮಿತಿ ಸಂಚಾಲಕ ಚಂದ್ರಶೇಖರ ಪನ್ನೆ, ಆಂತರಿಕ ಲೆಕ್ಕ ಪರಿಶೋಧಕ ಮಹಾಲಿಂಗನ್ ಬಾಜರ್ತೊಟ್ಟಿ, ಮಹಿಳಾ ಘಟಕದ ಸದಸ್ಯೆ ಪ್ರೇಮ ಕುಡೆಕಲ್ಲು, ಸಮಿತಿ ಸಂಚಾಲಕ ಪ್ರವೀಣ್ ಜಯನಗರ, ಕೇಶವ ಮೊರಂಗಲ್ಲು, ನಿರ್ದೇಶಕ ರಾಧಾಕೃಷ್ಣ ಬೇರ್ಪಡ್ಕ ಉಪಸ್ಥಿತರಿದ್ದರು.