ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿಗೆ ಅಕ್ರಮ ಪ್ರವೇಶ:ಪ್ರಕರಣ ದಾಖಲು‌

ಸುಳ್ಯ : ಸುಳ್ಯದ ಕುರುಂಜಿಭಾಗ್‌ನಲ್ಲಿರುವ ಪಾಲಿಟೆಕ್ನಿಕ್‌‌ ಕಾಲೇಜಿಗೆ ತಂಡವೊಂದು ಅಕ್ರಮ ಪ್ರವೇಶ ಮಾಡಿ ಅಲ್ಲಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರನ್ನು ಬೆದರಿಸಿರುವುದಾಗಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಕಾಂತಮಂಗಲ ನಿವಾಸಿ ಡಾ.ಜ್ಯೋತಿ ಆರ್‌‌ ಪ್ರಸಾದ್‌‌ (52) ಎಂಬವರು ನೀಡಿದ ದೂರಿನಂತೆ ಐಪಿಸಿ ಕಲಂ 448, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Ad Widget . Ad Widget . Ad Widget . . Ad Widget . . Ad Widget .

ದೂರುದಾರರ ಬಾವ ಡಾ.ಚಿದಾನಂದ, ಅವರ ಹೆಂಡತಿ ಶೋಭ ಚಿದಾನಂದ, ಮಗ ಅಕ್ಷಯ್‌‌ ಕೆ ಸಿ, ಮಗಳು ಡಾ.ಐಶ್ವರ್ಯ, ಸಂಬಂದಿ ಹೇಮನಾಥ ಕೆ ವಿ, ಜಗದೀಶ್‌‌ ಅಡ್ತಲೇ ಮತ್ತು ಅವರ ಇತರ ಸಿಬ್ಬಂದಿಗಳು ಅಕ್ರಮ ಪ್ರವೇಶ ಮಾಡಿದವರೆಂದು ದೂರಿನಲ್ಲಿ ತಿಳಿಸಲಾಗಿದೆ.ಸೆ 6 ರಂದು ಡಾ ಜ್ಯೋತಿ ಆರ್‌‌ ಪ್ರಸಾದ್‌‌ ಅವರು ಮಂಗಳೂರಿಗೆ ಹೋಗಿದ್ದು ಈ ವೇಳೆ ಆರೋಪಿಗಳು ಕುರುಂಜಿಭಾಗ್‌ನಲ್ಲಿರುವ ಪಾಲಿಟೆಕ್ನಿಕ್‌‌ ಕಾಲೇಜಿಗೆ ಅಕ್ರಮ ಪ್ರವೇಶ ಮಾಡಿದ್ದಾರೆ. ಅಲ್ಲಿದ್ದ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರ ಮೊಬೈಲ್‌‌ಗಳನ್ನು ಕೇಳಿ ಪಡೆದು, ಸಿ ಸಿ ಕ್ಯಾಮರಗಳ ಮತ್ತು ಇತರ ಮಾಹಿತಿ ಪಡೆದು, ಮೊಬೈಲ್‌‌ಗಳನ್ನು ಹಿಂತಿರುಗಿಸಿ, ಬೆದರಿಸಿ ಹೋಗಿರುತ್ತಾರೆ ಎಂದು ಆರೋಪಿಸಿರುವ ಅವರು , ಮಾಹಿತಿ ತಿಳಿದ ತಾನು ತಕ್ಷಣ ಗಾಬರಿಯಾಗಿ ಮಂಗಳೂರಿನಿಂದ ಸುಳ್ಯದ ಸಂಸ್ಥೆಗೆ ಬಂದಿರುವುದಾಗಿ ತಿಳಿಸಿದ್ದಾರೆ.

. Ad Widget . Ad Widget . Ad Widget

Leave a Comment

Your email address will not be published. Required fields are marked *

error: Content is protected !!
Scroll to Top