ಸುಳ್ಯ ತಾಲೂಕಿನ ವಿವಿಧೆಡೆ ಬುಧವಾರ ರಾತ್ರಿ ಭಾರೀ ಗಾಳಿ ಮಳೆ ಸುರಿದ ಹಿನ್ನಲೆಯಲ್ಲಿ ಅಪಾರವಾಗಿ ಹಾನಿ ಉಂಟಾದ ಘಟನೆ ವರದಿಯಾಗಿದೆ. ಗಾಳಿ ಮಳೆಗೆ ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಬಳಿಯಿದ್ದ ತೆಂಗಿನಮರವೊಂದು ಶಾಲಾ ಕಟ್ಟಡದ ಮೇಲೆ ಬಿದ್ದ ಪರಿಣಾಮವಾಗಿ ಶಾಲಾ ಕಟ್ಟಡ ಹಾಗೂ ಹಂಚುಗಳಿಗೆ ಹಾನಿಯಾಗಿದೆ.ಅಲ್ಲದೆ ವಿದ್ಯುತ್ ಲೈನಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.ಇದಲ್ಲದೆ ಇತರೆಡೆ ಹಾನಿ ಉಂಟಾದ ಬಗ್ಗೆ ವರದಿಯಾಗುತ್ತಿದೆ.