ಸುಳ್ಯ : ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಉನ್ನತ ಪ್ರಶಸ್ತಿಗೆ ಸುಳ್ಯದ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಮತ್ತು ತುಳುನಾಡ ಸಿರಿ ಖ್ಯಾತಿಯ ಶ್ರೇಷ್ಠ ಅಭಿನೇತ್ರಿ ರಂಗ ಕಲಾವಿದೆ ಸರೋಜಿನಿ ಶೆಟ್ಟಿ ಅವರ ನಾಮ ನಿರ್ದೇಶನಕ್ಕೆ ಐಲೇಸಾ-ದಿವಾಯ್ಸ್ ಆಫ್ ಓಶನ್ ರಿ. ಸಂಸ್ಥೆ ಅಭಿಯಾನ ಕೈಗೊಂಡಿದೆ.
ನಾಮನಿರ್ದೇಶನ ಪ್ರಕ್ರಿಯೆ ಅ.15ರಂದು ಕೊನೆಗೊಳ್ಳಲಿದ್ದು ಸಾಹಿತ್ಯ ಸಾಂಸ್ಕೃತಿಕ ಅಭಿಮಾನಿಗಳೆಲ್ಲರೂ ಈ ಇಬ್ಬರು ಅರ್ಹ ವ್ಯಕ್ತಿಗಳ ಆಯ್ಕೆಗಾಗಿ ಕರ್ನಾಟಕ ಸೇವಾ ಸಿಂಧು https://sevasindhu.karnataka.gov.in
ವೆಬ್ ಸೈಟಿನಲ್ಲಿ ಕ್ರಮವಾಗಿ ಸಾಹಿತ್ಯ ಮತ್ತು ಸಿನಿಮಾ, ರಂಗಭೂಮಿ ವಿಭಾಗದಲ್ಲಿ ನಾಮ ನಿರ್ದೇಶನ ಮಾಡಬೇಕೆಂದು ಐಲೇಸಾದ ಮೀಡಿಯಾ ಸಂಚಾಲಕ ವಿವೇಕ್ ಮಂಡಕರಮತ್ತು ಸುರೇಂದ್ರ ಮಾರ್ನಾಡು ಅವರು ಸಾಹಿತ್ಯಾಭಿಮಾನಿಗಳಲ್ಲಿ ವಿನಮ್ರವಾಗಿ ವಿನಂತಿಸಿಕೊಂಡಿದ್ದಾರೆ.
ಉನ್ನತ ಪ್ರಶಸ್ತಿಗೆ ಅರ್ಹರು ಆಯ್ಕೆಯಾಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 90082 42735 ಮತ್ತು 93242 80156
ಕರೆ ಮಾಡಿ ವಿವರ ತಿಳಿಯಬಹುದು.