ಪುತ್ತೂರು ನಗರದ ಕಲ್ಲೇಗ ಟೈಗರ್ಸ್ ಹುಲಿವೇಷ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಓರ್ವ ಕಾಂಗ್ರೆಸ್ ಪಕ್ಷದ ಮುಖಂಡ ಎಂದು ತಿಳಿದು ಬಂದಿದೆ.ನಾಲ್ವರು ಆರೋಪಿಗಳಾಗಿರುವ ಮನೀಷ್, ಚೇತನ್, ಮಂಜುನಾಥ್ ಮತ್ತು ಕೇಶವ ಪೊಲೀಸ್ ವಶದಲ್ಲಿದ್ದು ಈ ಪೈಕಿ ಕೇಶವ ಪುತ್ತೂರು ನಗರ ಕಾಂಗ್ರೆಸ್ ನ ಎಸ್ ಸಿ ಘಟಕದ ಅಧ್ಯಕ್ಷ ಎನ್ನಲಾಗಿದೆ.ಎರಡು ತಲವಾರಿನಲ್ಲಿ ಅಕ್ಷಯ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದು, ಪೋಸ್ಟ್ ಮಾರ್ಟಂ ವೇಳೆ 58 ರಷ್ಟು ಗಾಯಗಳು ಪತ್ತೆಯಾಗಿವೆ. ಮೊದಲು ಮೃತ ಅಕ್ಷಯ್ ಮತ್ತು ಆರೋಪಿಗಳ ನಡುವೆ ದೂರವಾಣಿ ಮೂಲಕ ಮಾತಿನ ಚಕಮಕಿ ನಡೆದಿದ್ದು ನಂತರ ಪುತ್ತೂರಿನ ನೆಹರು ನಗರದಲ್ಲಿ ಸ್ನೇಹಿತ ವಿಖ್ಯಾತ್ ಜೊತೆ ಇದ್ದಾಗ ಬಂದಿದ್ದ ಆರೋಪಿಗಳು ತಲವಾರುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ವಿಖ್ಯಾತ್ ನೀಡಿರುವ ದೂರಿನಂತೆ ಪುತ್ತೂರು ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.