ರಾಷ್ಟ್ರೀಯ ಕಬಡ್ಡಿ ಪಂದ್ಯಾಟ ಮಹಿಳಾ ವಿಭಾಗದಲ್ಲಿ ಟಿಎಂಸಿ ಥಾಣೆ ಚಾಂಪಿಯನ್

ಸುಳ್ಯ: ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಮಹಿಳಾ ವಿಭಾಗದಲ್ಲಿ ಟಿಎಂಸಿ ಥಾಣೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.ನ್ಯಾಷನಲ್ಸ್ ಬೆಂಗಳೂರು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತೃತೀಯ ಸ್ಥಾನವನ್ನು ಕನ್ಯಾಕುಮಾರಿ ತಮಿಳುನಾಡು ಹಾಗೂ ಚತುರ್ಥ ಸ್ಥಾನ ಪಾಂಡಿಚೇರಿ ಪಡೆದುಕೊಂಡಿತು. 4 ತಂಡಗಳು ಭಾಗವಹಿಸಿದ್ದ ಮಹಿಳಾ ವಿಭಾಗದ ಪಂದ್ಯದ ಲೀಗ್ ವಿಭಾಗದ ಅಂತಿಮ ಪಂದ್ಯದಲ್ಲಿರೋಚಕ ಹಣಾಹಣಿಯಲ್ಲಿ ಟಿಎಂಸಿ ಥಾಣೆ ತಂಡ 37-35 ಅಂಕಗಳ ಅಂತರದಲ್ಲಿ ನ್ಯಾಷನಲ್ ಬೆಂಗಳೂರು ತಂಡವನ್ನು ಸೋಲಿಸಿತು. ಈ ಮೂಲಕ ಲೀಗ್ ಹಂತದಲ್ಲಿ 3 ಜಯ ದಾಖಲಿಸಿದ ಟಿಎಂಸಿ ಥಾಣೆ ಪ್ರಥಮ ಸ್ಥಾನಿಯಾಗಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಲೀಗ್ ಹಂತದಲ್ಲಿ ಎರಡು ಜಯ ದಾಖಲಿಸಿದ ನ್ಯಾಷನಲ್ಸ್ ಬೆಂಗಳೂರು ದ್ವಿತೀಯ ಸ್ಥಾನಿಯಾಯಿತು. ಮಹಿಳೆಯರ ವಿಭಾಗದ ಲೀಗ್ ಹಂತದ ಮತ್ತೊಂದು ಪಂದ್ಯದಲ್ಲಿ ಕನ್ಯಾಕುಮಾರಿ ತಮಿಳುನಾಡು ತಂಡ ಪಾಂಡಿಚೇರಿ ತಂಡವನ್ನು 19-13 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿತು. ತಮಿಳುನಾಡು ತಂಡ ತೃತೀಯ ಸ್ಥಾನ ಪಡೆದುಕೊಂಡರೆ, ಪಾಂಡಿಚೇರಿ ಚತುರ್ಥ ಸ್ಥಾನ ಪಡೆದುಕೊಂಡಿತು. ಬೆಸ್ಟ್‌ ರೈಡ‌ರ್ ಆಗಿ ನ್ಯಾಷನಲ್ಸ್ ಬೆಂಗಳೂರು ತಂಡದ ಶ್ರೀಲಕ್ಷ್ಮಿ, ಬೆಸ್ಟ್ ಡಿಫೆಂಡ‌ರ್ ಆಗಿ ನ್ಯಾಷನಲ್ಸ್ ಬೆಂಗಳೂರಿನ ವೃಂದಾ, ಬೆಸ್ಟ್ ಆಲ್ ರೌಂಡರ್ ಅಗಿ ಟಿಎಂಸಿ ಥಾಣೆಯ ಮಾಧುರಿ ಆಯ್ಕೆಯಾಗಿದ್ದಾರೆ. ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್‌ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್‌ಶಿಪ್‌ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋ‌ರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top