ಅಣ್ಣ ಸ್ಥಿತಿ ಚಿಂತಾಜನಕ
ಸುಳ್ಯ : ತಮ್ಮನೋರ್ವ ಅಣ್ಣನ ಮೇಲೆ ಗಾರೆ ಕೆಲಸ ಮಾಡುವ ಸಾಧನದಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಿಂದ ವರದಿಯಾಗಿದೆ. ಎಂ.ಚೆಂಬು ಗ್ರಾಮದ ನಾಯರ್ ಗದ್ದೆ ದುರ್ಗಾಪ್ರಸಾದ್ ಎಂಬವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ತಮ್ಮ ನಾಯರ್ ಗದ್ದೆ ಪದ್ಮನಾಭ ಎಂಬುವವರಿಂದ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.ಗಂಭೀರ ಸ್ಥಿತಿಯಲ್ಲಿರುವ ದುರ್ಗಾ ಪ್ರಸಾದ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.