ವೈಭವದಿಂದ ನಡೆದ ಪಂಜ ಪಂಚಲಿಂಗೇಶ್ಬರ ದೇವರ ರಥೋತ್ಸವ

ಪಂಜ : ಇತಿಹಾಸ ಪ್ರಸಿದ್ದ ಪಂಜ ಸೀಮೆಯ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ಮಂಗಳವಾರ ರಾತ್ರಿ ಶ್ರದ್ದಾ ಭಕ್ತಿಯಿಂದ ಬ್ರಹ್ಮ ರಥೋತ್ಸವ ನಡೆಯಿತು. ಸಾವಿರಾರು ಮಂದಿ ಭಕ್ತರು ರಥೋತ್ಸವವನ್ನು ಕಣ್ಣುಂಬ್ತಿಕೊಂಡರು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳ ಬಳಿಕ ಬ್ರಹ್ಮ ರಥೋತ್ಸವ ನಡೆಯಿತು.
ಶ್ರೀ ಕಾಡು ಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ ಶ್ರೀ ಭೂತಬಲಿ, ಶಯನೋತ್ಸವ, ಕವಾಟ ಬಂಧನ ಜರುಗಿತು. ಪೂರ್ವ ಸಂಪ್ರದಾಯದಂತೆ ಐವತ್ತೊಕು ಪಟೇಲ್ ಮನೆಯವರನ್ನು ಹಾಗೂ ಪುತ್ಯ, ಕುದ್ವ ಮನೆಯ ಪೈಯೋಳಿ ಮಕ್ಕಳನ್ನು ರಥೋತ್ಸವಕ್ಕೆ ಸ್ವಾಗತಿಸಿ ಗೌರವಿಸಲಾಯಿತು.
ಸಾವಿರಾರು ಮಂದಿ ರಥೋತ್ಸವವನ್ನು ಕಣ್ಣುಂಬಿಕೊಂಡರು.ದೇವಳದ ಮೈದಾನದಲ್ಲಿ ಭಜನಾ ತಂಡಗಳ ಕುಣಿತ ಭಜನೆ, ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದಿಂದ ಕೀಲು ಕುದುರೆ, ಕರಗನೃತ್ಯ ಗೊಂಬೆಯಾಟ ಹಾಗೂ ಬೇತಾಳಗಳು, ಚೆಂಡೆ ವಾದನ ಕೊಂಬು ಕಹಳೆ ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿತು.
ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್ ಅವರು ಜಾತ್ರೋತ್ಸವದ ನೇತೃತ್ವ ವಹಿಸಿದ್ದರು. ದೇವಳದ ಆಡಳಿತಾಧಿಕಾರಿ, ತಹಶೀಲ್ದಾರ್ ಜಿ. ಮಂಜುನಾಥ್, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯೆ ಮಲ್ಲಿಕಾ ಪಕ್ಕಳ, ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ಉಪತಹಶೀಲ್ದಾರ್ ಚಂದ್ರಕಾಂತ್ ಎಂ. ಆ‌ರ್, ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್‌ ಪೈ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ, ಉತ್ಸವ ಸಮಿತಿ ಸದಸ್ಯರು,ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top