ಅಜ್ಜಾವರ ಚೈತನ್ಯ ಸೇವಾ ಟ್ರಸ್ಟ್ (ರಿ.) ಇದರ
ಶ್ರೀ ದೇವಿ ಭಗವತಿ ಮಂದಿರದ 26ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಕ್ರತಿ ಬಿಡುಗಡೆ
ಏ.7 ರಂದು ಆಶ್ರಮದಲ್ಲಿ ನಡೆಯಲಿದೆ ಎಂದು ಇಲ್ಲಿಯ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ ಗಂಟೆ 9-00ಕ್ಕೆ ಗಣಪತಿ ಪೂಜೆ,ಗಂಟೆ 10-00ಕ್ಕೆ : ಸತ್ಯನಾರಾಯಣ ದೇವರ ಪೂಜೆ,
ಗಂಟೆ 11-00ಕ್ಕೆ ಭಜನಾ ಸತ್ಸಂಗ ಅಡೂರು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯ ಬಾಲ ಪ್ರತಿಭೆಗಳಿಂದ ನಡೆಯಲಿದೆ.
ಗಂಟೆ 12-00ಕ್ಕೆ ಮಂಗಳಾರತಿ ನಡೆಯಲಿರುವುದು.
ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಕೆ.ವಿ.ಜಿ. ಆಯುರ್ವೇದ ವಿದ್ಯಾಲಯ ಸುಳ್ಯ ಇದರ ಪ್ರೋಪೆಸರ್ ಡಾ.ಹರ್ಷವರ್ಧನ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ನಿವ್ರತ್ತ ಎ.ಎಸ್.ಐ ದೇವಯ್ಯ ಗೌಡ ಲೇಖಕಿ ಚಂದ್ರಾವತಿ ಬಡ್ಡಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿಯವರು ಬರೆದು ಪ್ರಕಟಿಸಿದ 202ನೇ ಕೃತಿ “ಯಜ್ಞ ಕರ್ಮ”
ಬಿಡುಗಡೆಗೊಳ್ಳಲಿದೆ ಎಂದು ಅವರು ಅವರು ತಿಳಿಸಿದ್ದಾರೆ.