ಸುಳ್ಯದಲ್ಲಿ ವೈಭವದ ಮೊಸರು ಕುಡಿಕೆ ಉತ್ಸವ
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ಹತ್ಯೆಯ ಸಂದರ್ಭ ಬಿಜೆಪಿ ಸರಕಾರ ಇದ್ದರೂ ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳ ಎನ್ ಕೌಟಂರ್ ಆಗಿಲ್ಕ
ಶ್ರೀಕೃಷ್ಣನ ಪ್ರೇರಣೆಯಲ್ಲಿ ಹಿಂದೂ ಹೃದಯದಲ್ಲಿ ಜಾಗೃತಿ ಯನ್ನು ಮೂಡಿಸಿ, ಹಿಂದೂ ಸಮಾಜವನ್ನು ಒಟ್ಟಾಗಿಸುವ ಮತ್ತು ರಕ್ಷಣೆ ಮಾಡುವ ಕೆಲಸ ವಿಶ್ವ ಹಿಂದೂ ಪರಿಷತ್ ಮಾಡುತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಂಘಟನೆಯು ಮೈಸೂರಿನಲ್ಲಿಯೂ ಪಕ್ಷ ಸಂಘಟನೆ ಮಾಡಲು ಪ್ರೇರಣೆಯಾಗಿದೆ. ಹಿಂದೂಗಳ ಸಂರಕ್ಷಣೆಗೆ ಪಣ ತೊಟ್ಟಿರುವ ವಿಶ್ವ ಹಿಂದೂ ಪರಿಷತ್ ಭಜರಂಗದಳವು ಎಲ್ಲಾ ರೀತಿಯ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಅಲ್ಲದೇ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳನ್ನು ಪೋಲಿಸ್ ಅಧಿಕಾರಿಗಳಿಗೆ ತಿಳಿಸಿದ್ದಾಗ ಅವರನ್ನು ಎನ್ ಕೌಂಟರ್ ಮಾಡದಂತೆ ತಡೆದ ಶಕ್ತಿ ಯಾವುದು ಆ ಸಂದರ್ಭದಲ್ಲಿ ಇದ್ದದ್ದು ಬಿಜೆಪಿ ಅಲ್ಲವೇ ಎಂದು ಹೇಳಿದರು. ಅಲ್ಲದೇ ಪ್ರಸ್ತುತ ಕಾಲಘಟ್ಟದಲ್ಲಿ ಪರಿವಾರ ಸಂಘಟನೆಯ ಹಿನ್ನಲೆಯ ನಾಯಕರು ರಾಜಕೀಯಕ್ಕೆ ಬರಬೇಕಿದೆ ಎಂದು ಅವರು ಹೇಳಿದರು.
ಅವರು ಸುಳ್ಯದಲ್ಲಿ ಸೆ.4 ರಂದು ರಾತ್ರಿ ಸುಳ್ಯ ವಿಶ್ವ ಹಿಂದು ಪರಿಷತ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ನಡೆದ ಮೊಸರು ಕುಡಿಕೆ ಉತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಭಾ ವೇದಿಕೆಯಲ್ಲಿ ವಿಶ್ವ ಹಿಂದು ಪರಷದ್ ಸ ಪ್ರಖಂಡದ ಮಾಜಿ ಅಧ್ಯಕ್ಷರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸಭಾ ವೇದಿಕೆಯಲ್ಲಿ ಹಿಂದು ಸಂಘಟನೆಯ ಮುಖಂಡ ಪುನಿತ್ ಅತ್ತಾವರ,ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷರಾದ ಎ ವಿ ತೀರ್ಥರಾಮ, ಮುರಳೀಕೃಷ್ಣ ಹಸಂತಡ್ಕ, ಸೋಮಶೇಖರ್ ಪೈಕ, ನವೀನ್ ಎಲಿಮಲೆ, ಪ್ರಕಾಶ್ ಯಾದವ್, ಬಾಲಸುಬ್ರಹ್ಮಣ್ಯ ಭಟ್, ಪ್ರದೀಪ್ ಸರಿಪಳ್ಳ, ಶ್ರೀಧರ ತೆಂಕಿಲ, ಹರಿಪ್ರಸಾದ್ ಎಲಿಮಲೆ, ದೀನಾ ಚಂದ್ರಶೇಖರ್, ಸೀತರಾಮ ಅಜ್ಜಾವರ,ರೂಪೇಶ್ ಪೂಜಾರಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿ ನವೀನ್ ಎಲಿಮಲೆ ವಂದಿಸಿದರು. ವಿಶಾಕ್ ಸಸಿಹಿತ್ತು ನಿರೂಪಿಸಿ, ಸ್ಪೂರ್ತಿ ಎಂ ರೈ ವೈಯಕ್ತಿಕ ಗೀತೆ ಹಾಡಿದರು