ಅರುಣ್ ಕುಮಾರ್ ಪುತ್ತಿಲ ಹಾಗೂ ಬೆಂಬಲಿಗರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷ ಪ್ರಾರ್ಥನೆ

ಪುತ್ತೂರು: ಲೈಂಗಿಕ ದೌರ್ಜನ್ಯ ಆರೋಪಗೊಳಗಾಗಿರುವ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲರಿಗೆ ನ್ಯಾಯಾಲಯ ಜಾಮೀನು ನೀಡಿರುವ ಹಿನ್ನಲೆಯಲ್ಲಿ ಪುತ್ತಿಲ ಹಾಗೂ ಬೆಂಬಲಿಗರು ಬುಧವಾರ ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅರುಣ್ ಕುಮಾ‌ರ್ ಪುತ್ತಿಲ ಪುತ್ತೂರು ದೇವಳದ ಗದ್ದೆಗೆ ಆಗಮಿಸುತ್ತಿದ್ದಂತೆ ಆನೇಕ ಮಂದಿ ಆಗಮಿಸಿ ಶುಭ ಕೋರಿದರು.
ಇದೇ ಸಂದರ್ಭ ಮಾಧ್ಯಮದ ಜೊತೆ ಮಾತನಾಡಿ ಅವರು, ಈ ಪ್ರಕರಣದ ಹಿಂದೆ ಕಾಣದ ಕೈಗಳ ಭಾರೀ ಷಡ್ಯಂತ್ರ ಇದೆ.ಅದರಿಂದ ಮುಕ್ತನಾಗಿ ಹೊರ ಬಂದಿದ್ದೇನೆ. ಈಗಲೂ ಆರೋಪಗಳಿಂದ ಮುಕ್ತನಾಗುತ್ತೇನೆ. ಕಷ್ಟಕಾಲದಲ್ಲಿ ತನ್ನೊಂದಿಗಿದ್ದ ಕಾರ್ಯಕರ್ತರಿಗೆ, ಬಿಜೆಪಿ ನಾಯಕರಿಗೆ, ಮಾಧ್ಯಮ ಮಿತ್ರರಿಗೆ ದನ್ಯವಾದ ತಿಳಿಸಿದರು.
ಬಳಿಕ ದೇವಸ್ಥಾನದ ಒಳಗಡೆ ತೆರಳಿ ದೇವರ ನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top