ಪೆರಾಜೆ ಗ್ರಾಮದ ಅಮಚೂರು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಲಾಲಿ ಪಿ.ಜೆ ಅವರು ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ನೀಡಲಾಗುವ 2024 2025ನೇ ಸಾಲಿನ ನೇಶನ್ ಬಿಲ್ಡರ್ ಅವರ್ಡ್ ನ್ನು ಮಡಿಕೇರಿಯಲ್ಲಿ ರೋಟರಿ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಇವರ ಬಹುಮುಖ ಪ್ರತಿಭೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೇವೆಯನ್ನು ಪರಿಗಣಿಸಿ ಮಡಿಕೇರಿಯಲ್ಲಿ ಸೆ.4 ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಶಿಕ್ಷಕಿ ಲಾಲಿಯವರು ಸಕ್ರಿಯವಾಗಿದ್ದು ಕಳೆದ 6 ವರ್ಷ ಸಿಆರ್ ಪಿಯಾಗಿ ಸೇವೆ ಸಲ್ಲಿಸಿದ್ದು ಸೌಮ್ಯ ಸ್ವಭಾವದ ವ್ಯಕ್ತಿತ್ವ ಹೊಂದಿರುವ ಇವರು ಸುಳ್ಯದ ಕಾರ್ಮಿಕ ನಾಯಕ ಕೆ.ಪಿ ರಾಬರ್ಟ್ ಡಿಸೋಜರ ಪತ್ನಿ.