ಪೆರಾಜೆ : ಕಪ್ಪುಪಟ್ಟಿ ಧರಿಸಿ,ಕಪ್ಪು ಬಾವುಟ ಹಿಡಿದು ಮಾನವ ಸರಪಳಿಯಲ್ಲಿ ಪ್ರತಿಭಟನೆ

ಸುಳ್ಯ : ಸುಳ್ಯ ನಗರದ ಕಸವನ್ನು ಕಲ್ಬರ್ಪೆಯ ವಿಲೇವಾರಿ ಘಟಕದಲ್ಲಿ ಹಾಕುತ್ತಿರುವುದರಿಂದ ಸಮರ್ಕವಾಗಿ ವಿಲೇವಾರಿಯಾಗದೆ ಅಲ್ಲಿನ ಸ್ಥಳೀಯರು ನಿತ್ಯ ಸಮಸ್ಯೆ ಎದುರಿಸುತ್ತಿದ್ದು, ತ್ಯಾಜ್ಯ ನೀರಿನೊಂದಿಗೆ ನದಿಗೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ. ಇದರ ವಿರುದ್ಧ ಹೋರಾಟದ ಅಂಗವಾಗಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಹಮ್ಮಿಕೊಂಡಿರುವ ಮಾನವ ಸರಪಳಿಯಲ್ಲಿ ಕಲ್ಪರ್ಪೆಯ ಸ್ಥಳೀಯರು ಮತ್ತು ಪರಿಸರ ಹೋರಾಟ ಸಮಿತಿ ಸಿರಿಕುರಳ್ ನಗರ ಕಲ್ಚೆರ್ಪೆಯ ಆಲೆಟ್ಟಿಯರು ಕಪ್ಪುಪಟ್ಟಿ ಧರಿಸಿ,ಕಪ್ಪು ಭಾವುಟ ಹಿಡಿದು ಪ್ರತಿಭಟನೆ ನಡೆಸಿದರು.
ಪರಿಸರದಲ್ಲಿ ತುಂಬಿಸಿರುವ ಘನತ್ಯಾಜ್ಯವನ್ನು ವಿಲೇವಾರಿ ಮಾಡಿ ಈಗಿರುವ ತ್ಯಾಜ್ಯ ಘಟಕವನ್ನು ಸ್ಥಳಾಂತರಿಸಬೇಕು.
ಪರಿಸರದಲ್ಲಿ ವಾಸವಾಗಿರುವ ಜನರ ಮತ್ತು ಮಕ್ಕಳ ಪ್ರಾಣಕ್ಕೆ ಅಪಾಯ ಬಾರದ ರೀತಿಯಲ್ಲಿ ಕ್ರಮಕೈಗೊಳ್ಳತಕ್ಕದ್ದು.
ಪರಿಸರಕ್ಕೆ ಸಾಂಕ್ರಾಮಿಕ ರೋಗ ಬರದಂತೆ ತಡೆಗಟ್ಟುವುದು.
ಸುಳ್ಯ ನಗರದ ಜನರಿಗೆ ಪೂಮಲೆಯಿಂದ ಹರಿದು ಬರುವ ನೀರಿನ ಜೊತೆಗೆ ತ್ಯಾಜ್ಯ ವಸ್ತುಗಳು ಮಿಶ್ರಣವಾಗಿ ಪಯಶ್ವಿನಿ ನದಿಗೆ ಸೇರುವುದರಿಂದ ಕುಡಿಯುವ ನೀರು ಮಲೀನವಾಗಿ ಸಾಂಕ್ರಾಮಿಕ ರೋಗ ಹರಡುವುದರ ಬಗ್ಗೆ ಸುಳ್ಯ ನಗರ ಪಂಚಾಯತ್ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.
ನಗರ ಪಂಚಾಯತ್ ಮಾಜಿ ಸದಸ್ಯ ಗೋಕುಲದಾಸ್,
ಹೋರಾಟ ಸಮಿತಿ ಉಪಾಧ್ಯಕ್ಷ ಅಶೋಕ್ ಪೀಚೆ
ಕಲ್ಬರ್ಪೆ ಹೋರಾಟ ಸಮಿತಿ ಅಧ್ಯಕ್ಷ ಸುಧೇಶ್, ಸಮಿತಿ ಪ್ರಧಾನ ಕಾಯದರ್ಶಿ ಬಾಲಚಂದ್ರ ಕಲ್ಪರ್ಪೆ, ಗೌರವಾಧ್ಯಕ್ಷ ಯುಸುಫ್ ಅಂಜಿಕಾರು,ಉಪಾಧ್ಯಕ್ಷ,ನಾರಾಯಣ ಜಬಳೆ, ಜನಾರ್ದನ, ವೆಂಕಟೇಶ್, ಅನಿಲ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆಗೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪ್ರತಿಭಟನೆ ಕೈ ಬಿಡಬೇಕೆಂದು ಹೇಳಿದರು.ಆಗ ಪ್ರತಿಭಟನೆಗಾರರು ನಮ್ಮ ಬೇಡಿಕೆ ಇಡೇರಿಸುವಂತೆ ತಹಶಿಲ್ದಾರರು ಭರವಸೆ ನೀಡಬೇಕೆಂದು ಒತ್ತಾಯಿಸಿದರು.ಆಗ ಬೇಡಿಕೆ ಇಡೇರಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಯಿತು

Ad Widget . Ad Widget . Ad Widget . . Ad Widget . . Ad Widget .

.

. Ad Widget . Ad Widget . Ad Widget

Leave a Comment

Your email address will not be published. Required fields are marked *

error: Content is protected !!
Scroll to Top