ಮಂಗಳೂರು : ತನ್ನ ಸಂಬಂಧಿಕರೊಬ್ಬರಿಗೆ (Already)ಲಿವರ್ ದಾನ ಮಾಡಿದ್ದ ನಗರದ ಉಪನ್ಯಾಸಕಿ ಅರ್ಚನಾ ಕಾಮತ್ (33) ಅವರು ಮೃತಪಟ್ಟ ಘಟನೆ ವರದಿಯಾಗಿದೆ.
ತನ್ನ ಪತಿಯ ಸಂಬಂಧಿ ಮಹಿಳೆಯೋರ್ವರಿಗೆ ಲಿವರ್ ಕಸಿ ಮಾಡಬೇಕಾಗಿತ್ತು. ಹಲವರನ್ನು ತಪಾಸಣೆಗೆ ಒಳಪಡಿಸಿದ್ದರೂ ಹೊಂದಾಣಿಕೆಯಾಗಿರಲಿಲ್ಲ. ಅರ್ಚನಾ ಅವರ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು ಹಾಗೂ ಅವರು ಲಿವರ್ ದಾನಕ್ಕೆ ಒಪ್ಪಿದ್ದರು. ಅದರಂತೆ 12 ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಅರ್ಚನಾ ಅವರ ಲಿವರ್‌ನ ಸ್ವಲ್ಪ ಭಾಗವನ್ನು ಮಹಿಳೆಗೆ ಕಸಿ ಮಾಡಲಾಗಿತ್ತು. ಆರೋಗ್ಯದಿಂದಿದ್ದ ಅರ್ಚನಾ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.ಬಳಿಕ ದಿಡೀರ್ ಅಸ್ವಸ್ಥಗೊಂಡು ಮಹಿಳೆ ಸಾವನ್ಮಪ್ಪಿದ್ದಾರೆ ಎಂದು ತಿಳಿದು ಬಂದಿದೆ.