ಸುಳ್ಯ : ಆಲೆಟ್ಟಿ ಗ್ರಾಮದ ಮಾಣಿ ಮೈಸೂರು ರಾಷ್ಡ್ರೀಯ ಹೆದ್ದಾರಿಯ ಪರಿವಾರ ಬಳಿ ಕಾರುಗಳ ನಡುವೆ ಅಪಘಾತ ಸಂಭವಿಸಿ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ.
ಸುಳ್ಯ ಕಡೆಗೆ ಬರುತ್ತಿದ್ದ ಆಲ್ಲೋ ಕಾರೊಂದು ಪರಿವಾರಕಾನದ ಬಳಿ ಎಡಭಾಗಕ್ಕೆ ತಿರುಗಿಸಲು ಯತ್ನಿಸಿದ್ದಾಗ ಸುಳ್ಯ ಕಡೆಗೆ ಬರುತ್ತಿದ್ದ ಇನ್ನೊಂದು ಕಾರು ಹಿಂಭಾಗದಿಂದ ಡಿಕ್ಕಿ ಹೊಡೆಯಿತು.
ಡಿಕ್ಕಿಯ ರಭಸಕ್ಕೆ ಅಲ್ಟೊ ಕಾರ್ ಮುಂಭಾಗಕ್ಕೆ ಚಲಿಸಿ ಗುಂಡಿಗೆ ಬಿತ್ತು.ಪರಿಣಾಮವಾಗಿ
ಕಾರಿನ ಮುಂಭಾಗ ಜಖಂಗೊಂಡಿದೆ ಈ ಕಾರು ಸಂಪಾಜೆ ಯ ಹೈಸ್ಕೂಲ್ ಮಾಸ್ತರ್ ಅಪ್ಪುಕುಂಞ ಚಲಾಯಿಸುತ್ತಿದ್ದ ವಾಹನವಾಗಿದ್ದು ಅವರು ಮತ್ತು ಮಗಳು ಇಬ್ಬರು ಪ್ರಯಾಣಿಸುತ್ತಿದ್ದು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.