ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರೋ ನಟ ದರ್ಶನ್‌ಗೆ ಈಗ ವಕೀಲರೇ ಎಚ್ಚರಿಕೆ ಸಂದೇಶ ಕಳುಹಿಸಿದ ಘಟನೆ ವರದಿಯಾಗಿದೆ.
ಜೈಲು ಸೇರಿದ ದಿನದಿಂದ ನಿತ್ಯವೂ ಕಿರಿಕ್ ಮಾಡಿಕೊಳ್ಳುತ್ತಿರುವ ನಟನಿಗೆ ಜೈಲಲ್ಲಿ ಕಿರಿಕ್ ಮಾಡಿಕೊಳ್ಳಬೇಡಿ ಎಂಬ ಸ್ಪಷ್ಟ ಎಚ್ಚರಿಕೆಯುಳ್ಳ ಪತ್ರವನ್ನು ಪತ್ನಿ ವಿಜಯಲಕ್ಷ್ಮಿ ಮೂಲಕ ಕಳುಹಿಸಿದ್ದಾರೆ. ಸಮಸ್ಯೆ ಮಾಡಿಕೊಂಡರೆ ಮುಂದೆ ಜಾಮೀನಿಗೆ ತೊಂದರೆಯಾಗಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನಾದರೂ ಸನ್ನಡತೆಯಿಂದ ಇರಿ ಎಂದು ಮನವಿ ಮಾಡಿದ್ದಾರೆ.