ಪೆರಾಜೆ : ಹಿರಿಯ ವಿದ್ಯಾರ್ಥಿ ಸಂಘ ರಚನೆ

ಪೆರಾಜೆ :ಕನ್ನಡ ಪೆರಾಜೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ರಚನಾ ಸಭೆ ಸೆ.15 ರಂದು ಸಂಘದ ಅಧ್ಯಕ್ಷರಾದ ಉನೈಸ್ ಪೆರಾಜೆ ಇವರ ನೇತೃತ್ವದಲ್ಲಿ ನಡೆಯಿತು.
ವೇದಿಕೆಯಲ್ಲಿ ಮಾಜಿ ಪಂಚಾಯತ್ ಸದಸ್ಯರಾದ ಅಬೂಬಕ‌ರ್.ಪಿ.ಎನ್, ಮಹಮ್ಮದ್ ಪೆರಾಜೆ ಉಪಸ್ಥಿತರಿದ್ದರು.
ಸಭೆಯಲ್ಲಿ ಮುಂದಿನ ದಿನಗಳಲ್ಲಿ ನಡೆಸಲು ತೀರ್ಮಾನಿಸಿದ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.
ಬಳಿಕ ಹಿರಿಯ ವಿದ್ಯಾರ್ಥಿ ಸಮಿತಿ ರಚಿಸಲಾಯಿತು.
ಸಂಘದ ಅಧ್ಯಕ್ಷರಾಗಿ ಉನೈಸ್ ಪೆರಾಜೆ ಪುನರಾಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ರವಿಚಂದ್ರ.ಕೆ.ಜೆ, ಕೋಶಾಧಿಕಾರಿಯಾಗಿ ಅಶೋಕ್ ಪೀಚೆಮನೆ, ಗೌರವಾಧ್ಯಕ್ಷರಾಗಿ ಅಬೂಬಕರ್.ಪಿ.ಎನ್, ಉಪಾಧ್ಯಕ್ಷರುಗಳಾಗಿ ಕಿರಣ್ ಬಿಳಿಯಾರು, ನಾಸಿರ್.ಎನ್.ಎ, ಶಾಹಿನ್.ಪಿ.ಎಂ, ಜೊತೆ ಕಾರ್ಯದರ್ಶಿಗಳಾಗಿ ಶಿಹಾಬ್ ಪೆರಾಜೆ, ತಮೀದ್ ಕಲ್ಪರ್ಪೆ, ಕ್ರೀಡಾ ಸಂಚಾಲಕರಾಗಿ ಅರ್ಷಾಕ್.ಕೆ.ಎ ಶಹನ್ ಪೆರಾಜೆ, ಖಲಂದ‌ರ್.ಪಿ.ಎಂ, ಸಾಮಾಜಿಕ ಜಾಲತಾಣದ ಪ್ರಮುಖರಾಗಿ ಶಿಹಾಬ್‌ ದಾಸರಹಿ ಸಲಹಾ ಸಮಿತಿ ಸದಸ್ಯರಾಗಿ ಮಹಮ್ಮದ್ ಪೆರಾಜೆ, ಸಿದ್ದೀಖ್ ಪಿ ಎನ್ ಇವರುಗಳನ್ನು ಆಯ್ಕೆ ಮಾಡಲಾಯಿತು.
ಅಶೋಕ್ ಪೀಚೆ ಮನೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಹಲವಾರು ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top