ಸುಳ್ಯ ಪರಿವಾರಕಾನ ಪರಿಸರದಲ್ಲಿ ಕಾಡಾನೆಗಳು ತೋಟಗಳಿಗೆ ದಾಳಿ ನಡೆಸಿ ಕೃಷಿ ನಾಶಗೈದಿರುವ ವರದಿಯಾಗಿವೆ.
ಸ್ಥಳೀಯರಾದ ಸುರೇಶ್, ಕೇಪಣ್ಣ ಮಾಸ್ಟರ್, ಸತ್ಯನಾರಾಯಣ ರವರ ಹಾನಿಯಾದ ತೋಟಗಳಿಗೆ ಕಾಡಾನೆಗಳು ದಾಳಿ ಮಾಡಿ ಕ್ರಷಿ ನಾಶ ಪಡಿಸಿವೆ.ಅಡಿಕೆ,ತೆಂಗು,ಬಾಳೆ ಇತರ ಕ್ರಷಿಯನ್ನು ಕಾಡಾನೆಗಳು ನಾಶ ಮಾಡಿವೆ.ಇದರಿಂದ ರೈತರಿಗೆ ನಷ್ಟ ಉಂಟಾಗಿದೆ.
ಈ ಭಾಗಗಳಿಗೆ ಸ್ಥಳೀಯ ನ ಪಂ ನ ಪಂ ಉಪಾಧ್ಯಕ್ಷ ಬುದ್ಧ ನಾಯ್ಕ್, ಮಾಜಿ ನ ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ,ಜಿನ್ನಪ್ಪ ಪೂಜಾರಿ ಇತರರು ಭೇಟಿ ನೀಡಿದರು.