ಅಕ್ಕ ಎತ್ತಿ ಬೆಳ್ಸಿದ ಕೂಸು ದೊಡ್ಡಣ್ಣನ ಮಂಙ
ವರ್ಸ ಕಳ್ದ್ ಹೋತ್ ಮಕ್ಕ ಬೆಳ್ದ್ ಬುಟ್ಟಾ
ಎರಡ್ ಹೆಣ್ಣ್ಮಕ್ಕ ಒಬ್ಬ ಮಂಙ
ಮೊದ್ವೆ ಮಾತ್ಕತೆ ಸುರಾತ್ ದೊಡ್ಡ ಮಗೊಳು ಲಕ್ಷೀಗೆ
ಒಂದು ವರ್ಸಲಿ ಮೊದ್ವೆ ಆತ್ ಅವ ಆಗ ಆರ್ನೆಕ್ಲಾಸ್
ಏಳ್ನೆಕ್ಲಾಸಿಗೆ ಹೋಕನ ಲಕ್ಷೀಗೆ ಒಂದು ಕೂಸಾತ್
ಇವಂಗೆ ಬೆಚ್ಚ ಆಕೆ ಸುರಾತ್ ಅಕ್ಕ ನನ್ನ ಮುಟ್ಟುಲೆಂತಾ
ಅಮ್ಮ ಹೇಳ್ದೆ ಗಡ ನೀ ಮಾವಂತ
ಮಾವ ಆದವು ಮಕ್ಕಳಿಗೆ ಏನಾರ್ ಕೊಡಕುಂತಾ ಕ್ರಮ
ಏನ್ ಗೊತ್ತಿಲ್ಲದೆ ಸುಮ್ಮನೆ ಕುದ್ದ್ ಯೋಚಿಸಿಕಂಡ್ ಇತ್ತ್
ಎಂತಾ ಕಥೆ ಇದ್ ಕೂಸು ಉಡ್ಗಿರೆಂತಾ
ಸಾಲೆಲಿ ಹೋಗಿ ಎಲ್ಲರೊಟ್ಟಿಗೆ ಕೇಳ್ದು ಒಂದೆ ಕೆಲ್ಸ ಆಗಿತ್ತ್ ಇವಂಗೆ
ಅವ್ಕು ಗೊತ್ಲೆ ಇವಂಗು ಗೊತ್ಲೆ ಬಾರಿ ಗಮ್ಮತ್ ಇತ್ತ್
ಇನ್ನೊಬ್ಬ್ಳಿಗೆ ಎರ್ಡ್ ವರ್ಸ ಕಳ್ದ್ ಮೊದ್ವೆ ಆದೆ
ಆಗನು ಇವಂಗೆ ಅದೇ ಬೆಚ್ಚ ಎಂತ ಇದೆಲ್ಲ ಅಕ್ಕನವರ ಕಳ್ಸಿಕೊಡ್ದುಂತಾ
ಅನೀಸ್ ದಿನಲಿ ಎಲ್ಲವೂ ಕೇಳ್ವೆ ನಿನ್ನ ಅಕ್ಕ ಬಸ್ರಿಯಾಂತ
ಆಗನು ಬೆಪ್ಪರಂಗೆ ನಂಗೆ ಎಂತ ಗೊತ್ತಿಲ್ಲೆಂತ ಹೇಳ್ತಿತ್ತ್
ವರ್ಸಲಿ ಸೊಸೆ ಕೂಸು ಬಾಕನ ಎಲ್ಲರ ಮೋರೆಲಿ ನೆಗೆನೆ ನೆಗೆ
ಆಗೋಲು ಅಮ್ಮಂದ್ ಅದೇ ರಾಗ ಉಡ್ಗಿರೆದ್
ಹೆಣ್ಣ್ ಕೂಸಿಗೆ ಏನು ಕೊಡೊಕುಂತನೆ ಗೊತ್ತಿಲ್ಲದವ ಇವ
ಕಾಲೇಜಿನ ಗೂಡೆ ಹೈದಂಗಳ ಎಲ್ಲಾ ಕರ್ಕಂಡ್ ಹೋದೆ ಒಂದಿನ ಬಟ್ಟೆ ತೆಗೆಕೆ
ಒಂದೇ ಪದ ನಾ ಮಾವ ಆದೆಯಾ ಆಕೆ ಬೊತ್ತಿತ್ತ್ ದುಡ್ಡು ಖರ್ಚಿಂತ.
*ಅನನ್ಯ ಎಚ್ ಸುಬ್ರಹ್ಮಣ್ಯ*