ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ-ರೆಂಜಿಲಾಡಿಯ ನೂಜಿಬೈಲ್ ತುಳುನಾಡ ತುಡರ್ ಯುವಕ ಮಂಡಲದ ವತಿಯಿಂದ ಅ.20ರಂದು ನಡೆಯಲಿರುವ ಕೆಸರುಗದ್ದೆಯಲ್ಲಿ ಕಂಬಳ ಸ್ನೇಹಕೂಟದ ಕಂಬಳ ಕರೆ ನಿರ್ಮಾಣಕ್ಕೆ ಮುಹೂರ್ತ ಕಾರ್ಯಕ್ರಮ ಗುರುವಾರ ರೆಂಜಿಲಾಡಿ ಗ್ರಾಮದ ದಿ.ಸಾಂತಪ್ಪ ಗೌಡ ಸಾಕೋಟೆಜಾಲು ಅವರ ಗದ್ದೆಯಲ್ಲಿ ನಡೆಯಿತು.
ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಪರಿಚಾರಕ ವಿಜಯಕುಮಾರ್ ಕೇಪುಂಜ ಅವರು ಕಂಬಳದ ಕೆರೆ ನಿರ್ಮಾಣಕ್ಕೆ ಚಾಲನೆ ನೀಡಿದರು. ಜಾಗದ ಮಾಲಿಕರಾದ ಚಂದ್ರಾವತಿ ಸಾಕೋಟೆಜಾಲು, ಸ್ಥಳೀಯರಾದ ಪುರುಷೋತ್ತಮ ಗೌಡ ಸಂಕೇಶ, ತುಳುನಾಡ ತುಡರ್ ಯುವಕ ಮಂಡಲದ ಅಧ್ಯಕ್ಷ ತಿರುಮಲೇಶ್ವರ ಸಾಕೋಟೆಜಾಲು, ಸದಸ್ಯರಾದ ಯೋಗೀಶ್ ಬ್ರಾಂತಿಗುಂಡಿ, ದೀಕ್ಷಿತ್ ಬ್ರಾಂತಿಗುಂಡಿ, ನಿತಿನ್ ಕಲ್ಲುಗುಡ್ಡೆ, ಯಶವಂತ ಹೊಸಮನೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅ.20ರಂದು ಬೆಳಗ್ಗೆ 9ರಿಂದ ತುಳುನಾಡ ತುಡರ್ ಯುವಕ ಮಂಡಲದ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಸಬ್ ಜೂನಿಯರ್ ವಿಭಾಗದ ನೇಗಿಲು ಕಿರಿಯ ಮತ್ತು ಜೂನಿಯರ್ ವಿಭಾಗದ ಹಗ್ಗ ಕಿರಿಯ ಮಟ್ಟದ ಕೆಸರುಗದ್ದೆಯಲ್ಲಿ ಜೋಡುಕರೆ ಕಂಬಳ ಸ್ನೇಹಕೂಟ ನಡೆಯಲಿದೆ.