ಅಜ್ಜಿ ಹೇಳ್ದೋ,ಮಕ್ಕಳೇ ಕಾಲ ಹಾಳಾತ್, ಬರ್ತಿತ್ ಕಾಲ ಕಾಲಕೆ ಮಳೆ, ಆಗ್ತಿತಿತ್ತ್ ಬೇಕಾದಷ್ಟೇ ಬೆಳೆ, ಪುರುಸೊತ್ ಇಲ್ಲೆ ಕೊಯ್ಲಿನ ಸಮಯ, ಉಂಡರೆ ಉಂಡೊ, ಇಲ್ಲರೆ ಇಲ್ಲೆ., ನೀರ್ನ ಚೇಂಪಿ, ಬೈರಸ್ ಕಟ್ಟಿ, ಸೊಂಟನ ನೆಟ್ಟಗೆ ಮಾಡಿಕೆ ಕಷ್ಟ.
ಈಗ
ಗಂಜಿ ಕೊಟ್ಟರೆ ಮಕ್ಕಳಿಗೆ ಉಂಬಕೆ ಬಂಙ ಕುರುಕುರೆ ಕೊಡಿ ಅಂತ ಕೇಳ್ದೆ ಮಂಙ, ಬಂದರೆ ಮಳೆ, ಹರ್ದದೆ ಹೊಳೆ ಕೊಚ್ಚಿದೆ ಕಟ್ಟ, ಜರ್ದದೆ ಬೆಟ್ಟ, ಕಾಯುವ ಭೂಮಿ, ಕೊಂದದೆ ನೋಡಿ, ಹೊರಿಕೆ ಬೊತ್ತ್ ಭೂಮಿ ತಾಯಿಗೆ. ಕೊನೆಗೆ ಇಲ್ಲೆ ನೀರ್, ಯಾರ ಬಾಯಿಗೆ.
ರಚನೆ: ಚಿನ್ನು ಮುಡೂರು