ಸುಳ್ಯ: ಮರಿ ಹಾಕಿದ ತಾಯಿ ನಾಯಿಯನ್ನು ಮರಿಗಳ ಜತೆ ಬಸ್ ತಂಗುದಾಣದಲ್ಲಿ ಬಿಟ್ಟು ಹೋಗಿರುವ ಘಟನೆ ಎಡಮಂಗಲದಲ್ಲಿ ನಡೆದಿದೆ.
ಸುಮಾರು 8 ಮರಿಗಳು ಹಾಗೂ ಅದರ ತಾಯಿಯನ್ನು ಎಡಮಂಗಲದ ಸುಳುತ್ತಡ್ಕ ಸಮೀಪದ ಮಹಾಕಾಳಿ ಬಸ್ ತಂಗುದಾಣದಲ್ಲಿ ಕೆಲ ದಿನಗಳ ಹಿಂದೆ ತಂದು ಬಿಡಲಾಗಿದೆ. ಸುಮಾರು 10-15 ದಿನಗಳು ಕಳೆದಿರುವ ಮರಿಗಳು ತಾಯಿ ನಾಯಿ ಜತೆಗೆ ಬಸ್ ತಂಗುದಾಣದಲ್ಲೇ ದಿನ ಕಳೆಯುತ್ತಿವೆ. ಎಲ್ಲೋ ಮರಿ ಹಾಕಿರುವ ನಾಯಿಯನ್ನು ಮರಿಗಳ
ಜತೆಗೆ ಇಲ್ಲಿ ತಂದು ಬಿಟ್ಟು ಹೋಗಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ನಾಯಿ ಮರಿಗಳು ಮತ್ತು ನಾಯಿಯನ್ನು ಬಸ್ ತಂಗುದಾಣದಲ್ಲಿ ಬಿಟ್ಟು ಹೋದ ಕಟುಕರು
