ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬೆಳ್ಳಾರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ )ಸುಳ್ಯ ತಾಲೂಕು ಬೆಳ್ಳಾರೆ ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ( ರಿ )ಬೆಳ್ಳಾರೆ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಶಿವರಾಮ ಕಾರಂತ ಕಾಲೇಜು ಬೆಳ್ಳಾರೆ ಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡ ರವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಬಳಿಕ ಅವರು ಸ್ವಾಸ್ಥ್ಯ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಹದಿ ಹರೆಯದಲ್ಲಿ ದಾರಿ ತಪ್ಪುವ ದುಶ್ಚಟ ದುರಭ್ಯಾಸ ಗಳಿಂದ ಆಗುವ ದುಷ್ಪರಿಣಾಮಗಳ ಮಧ್ಯಪಾನ ಧೂಮಪಾನ ಡ್ರಗ್ಸ್ ಗಳ ದುಷ್ಪರಿಣಾಮದ ಬಗ್ಹೆ ಮಾಹಿತಿ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಉಪಸ್ಥಿತರಿದ್ದರು .ಈ ಸಂದರ್ಭದಲ್ಲಿ ಆನಂದ ಗೌಡ ಪೆರಿಯಣ ಅಧ್ಯಕ್ಷರು ಜನಜಾಗೃತಿ ವೇದಿಕೆ ಬೆಳ್ಳಾರೆ ವಲಯ, ವಲಯ ವೇದ ಎಚ್.ಶೆಟ್ಟಿ.ಅಧ್ಯಕ್ಷರು ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಬೆಳ್ಳಾರೆ ವಲಯ. ಢಾ.ರಾಮಚಂದ್ರ ಕೆ.ಸಂಚಾಲಕರು lQAC.ಶ್ರೀ. ಗಿರೀಶ್ ಸಿ.ಆರ್.ಯೋಜನಾಧಿಕಾರಿಗಳು N S S. ಸುಂದರ ನಾಯ್ಕ.ಅಧ್ಯಕ್ಷರು ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಪೆರುವಾಜೆ
ಸೇವಪ್ರತಿನಿದಿಯವರಾದ ಹರೀನಾಕ್ಷಿ ಉಷಾ , ಪೆರುವಾಜೆ ಒಕ್ಕೂಟದ ಉಪಾಧ್ಯಕ್ಷರು ಅದ ಸುನೀತಾ ಕಾಲೇಜಿನ ಉಪನ್ಯಾಸಕರು ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಯಾದ ಕು ಶ್ರಾವ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು.
ವಲಯ ಮೇಲ್ವಿಚಾರಕರು ವಿಶಾಲ ಸ್ವಾಗತಿಸಿದರು.
ಕಾಲೇಜಿನ ವಿದ್ಯಾರ್ಥಿ ವಿನ್ಯಾಸ್ ವಂದಿಸಿದರು ವಿದ್ಯಾರ್ಥಿಗಳಾದ ಸ್ನೇಹ ಮತ್ತು ಚರಣ್ ಅವರು ಕಾರ್ಯಕ್ರಮ ದ ಅನಿಸಿಕೆ ವ್ಯಕ್ತ ಪಡಿಸಿದರು ಡ್ರಗ್ಸ್ ನಿಂದ ಆಗುವ ದುಷ್ಪಪರಿಣಾಮ ದ ಬಗ್ಗೇ ” ನಶೆಯೆಂಬ ನರಕ ” ಕಿರು ಚಿತ್ರ ವೀಕ್ಷಣೆ ಮಾಡಲಾಯಿತು.

Ad Widget . Ad Widget . Ad Widget . . Ad Widget . . Ad Widget .

. Ad Widget . Ad Widget . Ad Widget

Leave a Comment

Your email address will not be published. Required fields are marked *

error: Content is protected !!
Scroll to Top