ತೊಡಿಕಾನ : ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಬಳಿ ಇರುವ ತೊಡಿಕಾನ ಬಿ.ಎಸ್.ಎನ್ .ಎಲ್ ಟವರ್ ಕಳೆದ ಮೂರು ದಿವಸಗಳಿಂದ ಕೈ ಕೊಟ್ಟಿದ್ದು ಸ್ಥಳೀಯ ಗ್ರಾಮಸ್ಥರು,ಯಾತ್ರಿಕರು ಸಮಸ್ಯೆಗೊಳಗಾಗಿದ್ದಾರೆ.
ತೊಡಿಕಾನ ದೇವಳದ ವಠಾರದಲ್ಲಿ ಈ ಬಿಎಸ್ ಎನ್ ಟವರ್ ಮಾತ್ರ ಇರುವುದರಿಂದ ಸ್ಥಳೀಯರು ಇದೀಗ ಇತರರೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ.ಅಲ್ಲದೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ಅನೇಕ ಭಕ್ತರು ಆಗಮಿಸುತ್ತಿದ್ದು ಭಕ್ತರಿಗೂ ಸಮಸ್ಯೆಯಾಗಿದೆ.ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ತುರ್ತುಗಾಗಿ ಆ್ಯಂಬುಲೆನ್ಸ್ ಗೆ ಪೋನ್ ಮಾಡಲು ಇದೀಗ ನೆಟ್ ವರ್ಕ್ ಇಲ್ಲದ ಪರಿಸ್ಥಿತಿ ಎದುರಾಗಿದೆ.ಸಂಬಂಧಪಟ್ಟ ಇಲಾಖೆಯವರು ಈ ಸಮಸ್ಯೆಯ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.