ಐಲೇಸಾದ ವಿಶೇಷ ಪರಿಶ್ರಮದ ಮಹತ್ವಾಕಾಂಕ್ಷೆಯ  ಹಾಡು ಕೂಜಿನ ಪಾಟು ನಿಮ್ಮ ಮಡಿಲಿಗೆ

ತುಳುವಿನ ಆದಿಮೂಲ ಕೊರಗ ಭಾಷೆಯಲ್ಲಿ ಕೂಜಿ ಅಂದರೆ ಹೆಣ್ಣು ಮಗಳು. ಹೆಣ್ಣು ಮಗು ಹುಟ್ಟಿದರೆ ಕುಲ ಅಭಿವೃದ್ಧಿಯಾಗುವುದು ಮತ್ತು ಜೀವನ ಸುಗಮವಾಗುವುದು ಎನ್ನುವುದು ಕೊರಗರ ಮೂಲ ನಂಬಿಕೆ. ಹೆಣ್ಣು ಮಗುವಿನ ಜನನವನ್ನು ಅವರು ಹಾಡಿ ನಲಿಯುವ ಸಂಭ್ರಮವನ್ನು ಸಾಹಿತಿ ಪಾಂಗಾಳ ಬಾಬು ಕೊರಗ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಬುಡಕಟ್ಟು ಸೊಗಡಿನ ಸಂಗೀತ ನೀಡಿ ಹಾಡಿನ ಮೂಲ ಹೂರಣವನ್ನೆ ಉಣಬಡಿಸಿದ್ದಾರೆ. ಯುವ ಗಾಯಕ ಚೇತನ್ ಖುಷಿ ಗಟ್ಟಿ ಧ್ವನಿಯಲ್ಲಿ
ಸರಾಗವಾಗಿ ಹಾಡಿದ್ದಾರೆ. ಎರಡು ಕೊರಗ ಕಲಾ ತಂಡಗಳು ತಾಳಮಯವಾಗಿ, ಮುಗ್ಧವಾಗಿ ಹೆಜ್ಜೆ ಹಾಕಿದ್ದಾರೆ.

Ad Widget . Ad Widget . Ad Widget . . Ad Widget . . Ad Widget .

ಬೆಂಗಳೂರಿನ Schneider Electric ಸಂಸ್ಥೆಯ ಕಾನೂನು ಅಧೀಕ್ಷಕ ನಿಟ್ಟೆ ಕಿಶೋರ್ ಶೆಟ್ಟಿ ಸಹಕಾರದಲ್ಲಿ ಐಲೇಸಾ ನಿರ್ಮಿಸಿದ ಈ ಹಾಡನ್ನು ಕಾರ್ಕಳ ನಿಟ್ಟೆ ವಿಶ್ವ ವಿದ್ಯಾಲಯದಲ್ಲಿ 28-9-2024 ಶನಿವಾರದಂದು
ನಿಕಟಪೂರ್ವ ಉಪಕುಲಪತಿಗಳಾದ ಡಾ. ಸತೀಶ್ ಕುಮಾರ್ ಭಂಢಾರಿಯವರು ಲೋಕಕ್ಕೆ ಸಮರ್ಪಿಸಿದ್ದಾರೆ.

. Ad Widget . Ad Widget . Ad Widget

ಹಾಡು ಕೇಳಿ, ಇಷ್ಟವಾದರೆ ಇತರರೊಂದಿಗೆ ಹಂಚಿಕೊಂಡು ಈ ಪ್ರಯತ್ನವನ್ನು Subscribe ಮಾಡುವ ಮೂಲಕ ಬೆಂಬಲಿಸಿ ಎನ್ನುವ ವಿನಮ್ರ ಕೋರಿಕೆಯೊಂದಿಗೆ ಈ ಹಾಡಿನ YOUTube link ಹಂಚಿಕೊಂಡಿದ್ದೇವೆ.
ಸದ್ಯದಲ್ಲೆ ಈ ಹಾಡಿನ ಕರೋಕೆ ಕೂಡಾ ನಿಮ್ಮ ಕೈ ಸೇರಲಿದೆ.

ಐಲೇಸಾದ ಎಲ್ಲಾ ವಿಚಾರ, ಹಾಡುಗಳ ಬಗ್ಗೆ ಮಾಹಿತಿ, ವಿಚಾರವಿನಿಮಯ ಮಾಡಿಕೊಳ್ಳಲು ಈ ಕೆಳಗಿನ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ:
https://chat.whatsapp.com/KhuqvA7VIQlBOKVwsEoktf

ವಾಟ್ಸಪ್ ಚಾನಲ್: https://whatsapp.com/channel/0029VaGb97QBfxo3QHozxJ3s

ಮಾಹಿತಿ: ಟೀಂ ಐಲೇಸಾ

Leave a Comment

Your email address will not be published. Required fields are marked *

error: Content is protected !!
Scroll to Top