ಆಕಾಶವಾಣಿ ಕಾರ್ಯಕ್ರಮ ನಿರೂಪಕ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು ಆಕಾಶವಾಣಿಯಲ್ಲಿ, ಕನ್ನಡ, ತುಳು ಹಾಗೂ ಕೊಂಕಣಿ ಭಾಷೆಗಳಲ್ಲಿ, ನಿಯೋಜನೆ ಮೇರೆಗೆ ಉದ್ಯೋಷಕರು/ ಕಾರ್ಯಕ್ರಮ ನಿರೂಪಕರಾಗಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದು ಯಾವುದೇ ರೀತಿಯ ಉದ್ಯೋಗವಾಗಿರದೇ ಆಕಾಶವಾಣಿಯ ಅಗತ್ಯಕ್ಕೆ ತಕ್ಕಂತೆ ಅವರ ಸೇವೆಯನ್ನು ಬಳಸಿಕೊಳ್ಳಲಾಗುವುದು.
ಅಭ್ಯರ್ಥಿಗಳು ಪದವಿ ಉತ್ತೀರ್ಣರಾಗಿರಬೇಕು ಹಾಗೂ 50 ವರ್ಷ ವಯಸ್ಸಿನೊಳಗಿನವರಾಗಿರಬೇಕು. ಈ ಕುರಿತು ದಾಖಲೆಗಳ ನಕಲು ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿರಬೇಕು. ತಾವು ಅರ್ಜಿ ಸಲ್ಲಿಸಲು ಇಚ್ಛಿಸುವ ಭಾಷೆಯನ್ನು ಚೆನ್ನಾಗಿ ತಿಳಿದಿರಬೇಕು. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಆದ್ಯತೆ ನೀಡಲಾಗುವುದು.
ಅಭ್ಯರ್ಥಿಗಳು 354 ರೂಪಾಯಿಗಳ ಡಿ.ಡಿ.ಯನ್ನು DDO, Akashvani Bengaluru (Payable at Bengaluru) ಇವರಿಗೆ ಪಾವತಿಯಾಗುವಂತೆ ಪಡೆದು ಅರ್ಜಿಯೊಂದಿಗೆ ಕಳಿಸಿಕೊಡಬೇಕು. ಅಥವಾ ಪ್ರಸಾರ ಭಾರತಿಯ, ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆ ಸಂಖ್ಯೆ 10902815290 ಐಎಫ್‌ಎಸ್‌ಸಿ ಸಂಖ್ಯೆ SBIN0040016 ಗೆ ಜಮೆ ಮಾಡಿ ರಸೀದಿಯನ್ನು ಲಗತ್ತಿಸಬಹುದು. ಅರ್ಜಿಯನ್ನು ದಿನಾಂಕ 31.10.2024 ರ ಒಳಗೆ ತಲುಪುವಂತೆ ಕಳುಹಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸುವ ವಿಳಾಸ: ನಿಲಯ ನಿರ್ದೇಶಕರು, ಆಕಾಶವಾಣಿ ಮಂಗಳೂರು, ಬಿಜೈ ಪೋಸ್ಟ್, ಕದ್ರಿ ಹಿಲ್ಸ್ ಮಂಗಳೂರು ಅಥವಾ ನಿಲಯಕ್ಕೆ ಭೇಟಿ ನೀಡಬಹುದು.
ಅಭ್ಯರ್ಥಿಗಳು ಸಾಮಾನ್ಯ ಜ್ಞಾನ ಹಾಗೂ ಸಾಂಸ್ಕೃತಿಕ ವಿಚಾರಗಳನ್ನು ತಿಳಿದವರಾಗಿದ್ದು ಆಕಾಶವಾಣಿಯ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡಲು ಸಿದ್ದರಾಗಿರಬೇಕು. ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ಧ್ವನಿ ಪರೀಕ್ಷೆ ಹಾಗೂ ಸಂದರ್ಶನಗಳನ್ನು ಒಳಗೊಂಡಿರುತ್ತದೆ.ಆಯ್ಕೆಗೊಂಡವರಿಗೆ ನಿಯಮಾನುಸಾರ ಸಂಭಾವನೆ ನೀಡಲಾಗುವುದು ಎಂದು ಸೂರ್ಯನಾರಾಯಣ ಭಟ್, ಸಹ ನಿರ್ದೇಶಕರು, ಆಕಾಶವಾಣಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad Widget . Ad Widget . Ad Widget . . Ad Widget . . Ad Widget .

. Ad Widget . Ad Widget . Ad Widget

Leave a Comment

Your email address will not be published. Required fields are marked *

error: Content is protected !!
Scroll to Top