ಆಲೆಟ್ಟಿವ: ಆಲೆಟ್ಟಿ ಗ್ರಾಮದ ಕಲ್ಲೆಂಬಿಯ ನಿವಾಸಿ ದೈವ ನರ್ತಕ ದಿ.ಕುಕ್ಕ ರವರ ಪುತ್ರ ದೈವ ನರ್ತಕ ರಮೇಶ್ ಕಲ್ಲೆಂಬಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 35 ವರ್ಷ ಪ್ರಾಯವಾಗಿತ್ತು
ಮೃತರು ಆಲೆಟ್ಟಿ ಭಾಗದಲ್ಲಿ ಕೆಲವು ಮನೆತನದ ತರವಾಡು ಮನೆಯ ನೇಮೋತ್ಸವದ ಸಂದರ್ಭದಲ್ಲಿ ಕಲ್ಲುರ್ಟಿ ಗುಳಿಗ ದೈವದ ನರ್ತನ ಸೇವೆ ಮಾಡಿಕೊಂಡು ಬರುತ್ತಿದ್ದರು. ಮೃತರು ಅವಿವಾಹಿತರಾಗಿದ್ದು ತಾಯಿ ಸರೋಜಿನಿ ಹಾಗೂ ಸಹೋದರಿಯರನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.