ಮಾನವನು ಸತ್ಯ,ಧರ್ಮ ನ್ಯಾಯ ಮಾರ್ಗದಲ್ಲಿ ನಡೆಯುವುದನ್ನು ದೇವರು ಇಷ್ಟಪಡುತ್ತಾನೆ : ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ

ಅಜ್ಜಾವರ : ನಾವು ಸತ್ಯ,ಧರ್ಮ ನ್ಯಾಯ ಮಾರ್ಗದಲ್ಲಿ ನಡೆಯುವುದನ್ನು ದೇವರು ಇಷ್ಟಪಡುತ್ತಾನೆ ಎಂದು ಅಜ್ಜಾವ ಚೈತನ್ಯ ಸೇವಾಶ್ರಮದ ಸ್ವಾಮೀಜಿ‌ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ನವರಾತ್ರಿ ಅಂಗವಾಗಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾರೂ ಸ್ವಾರ್ಥಕ್ಕಾಗಿ ಸುಳ್ಳು ಹೇಳಿ ನ್ಯಾಯಾ ಮಾರ್ಗದಲ್ಲಿ ನಡೆಯದೆ ಇತರರಿಗೆ ಅನ್ಯಾಯ ಮಾಡಿದರೆ ಭಗವಂತ ಮೆಚ್ಚಲಾರ.ಈ ನಿಟ್ಟಿನಲ್ಲಿ ಸತ್ಯ,ಧರ್ಮ,ನ್ಯಾಯ ಮಾರ್ಗದಲ್ಲಿ ನಡೆದು ಪರೋಪಕಾರಿಯಾಗಿ ಬದುಕಬೇಕು.ಆಗ ನಮ್ಮ ಜೀವನ‌ ಸಾರ್ಥಕವಾಗುತ್ತದೆ ಎಂದು ಸ್ವಾಮೀಜಿಯವರು ಹೇಳಿದರು.
ಈ ಸಂದರ್ಭದಲ್ಲಿ ಸ್ವಾಮೀಜಿಯವರ 211ನೇ ಕ್ರತಿಮಾಲೆ ಸತ್ಯಂ ಶಿವಂ ಸುಂದರಂ ನ್ನು ಸುಳ್ಯ ಚಂದನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಸುಮಂಗಲ ಕೋಡಿವಾಳ ಬಿಡುಗಡೆಗೊಳಿಸಿ ಮಾತನಾಡಿ ನಾವು ಗುರು ಹಿರಿಯರು ನಮಗೆ ಹಾಕಿ ಕೊಟ್ಟಿರುವ ಹಜ್ಜೆಯನ್ನು ಹಾಕಿಕೊಂಡು ತಮ್ಮ ಧರ್ಮದ ಮೇಲೆ ನಂಬಿಕೆ ಇರಿಸಿಕೊಂಡು ನಾವು ದೇವರ ಆರಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.
ನಮ್ಮ ಸಂಸ್ಕ್ರತಿ ಆಚರಣೆಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವು ನಮ್ಮ ಕಿರಿಯರಿಯರಿಗೆ ತಿಳಿ ಹೇಳುವ ಅಗತ್ಯ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಕ್ರಷಿಕ ಜಗನ್ನಾಥ ಮುಡೂರು ಉಪಸ್ಥಿತರಿದ್ದರು.
ಸಾಯಿ ಪ್ರಶಾಂತ್ ಸ್ವಾಗತಿಸಿದರು. ಆಶ್ರಮದ ಟ್ರಸ್ಟಿ ಪ್ರಣವಿ ಕಾರ್ಯಕ್ರಮ ನಿರೂಪಿಸಿದರು.
ಆಶ್ರಮದಲ್ಲಿ ಗಣಹೋಮ,ದುರ್ಗಾ ಪೂಜೆ,ಸಾಯಿ ಪ್ರಶಾಂತ್ ಬಳಗದವರಿಂದ ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು.ಬಳಿಕ ಪ್ರಸಾದ ವಿತರಣೆ ಸಹಭೊಜನ ನಡೆಯಿತು.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top