ಸುಳ್ಯ : ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮ

ಸುಳ್ಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಸುಳ್ಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮವು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಕಣೆಮರಡ್ಕರವರ ಅಧ್ಯಕ್ಷತೆಯಲ್ಲಿ ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಸುಳ್ಯ M B ಫೌಂಡೇಶನ್ ಅಧ್ಯಕ್ಷರು , ಮಾಜಿ ಲಯನ್ಸ್ ರಾಜ್ಯ ಗವರ್ನರ್ ರವರಾದ ಶ್ರೀ M B ಸದಾಶಿವರವರು ದೀಪವನ್ನು ಪ್ರಜ್ವಲಿಸಿ ಮಾತನಾಡುತ್ತ, ಸಮಗ್ರ ಅಭಿವೃದ್ಧಿ ಮಾಡುವಂತದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾತ್ರ ಸಾಧ್ಯವಾಗಿದೆ. ಕಟ್ಟಕಡೆಯ ವ್ಯಕ್ತಿಗಳಿಗೂ ಕೂಡ ಬ್ಯಾಂಕ್ ನಿಂದ ಸಾಲ ತೆಗೆದು ಕೊಟ್ಟ ಹೆಗ್ಗಳಿಕೆ ಯೋಜನೆಗೆ ಇದೆ. ಸಂಘಗಳು, ಸದಸ್ಯರು ಮತ್ತು ಬ್ಯಾಂಕ್ ಗಳ ಮಧ್ಯೆ ಧರ್ಮಸ್ಥಳದ ಪೂಜ್ಯರು ಗ್ಯಾರಂಟಿಯಾಗಿ ನಿಂತು ಸಾಲದ ವ್ಯವಹಾರಗಳನ್ನು ಮಾಡುತ್ತಿದ್ದಾರೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮಗೆ ಮಾಹಿತಿಗಳು, ಮಾರ್ಗದರ್ಶನಗಳು, ತರಬೇತಿಗಳು, ಅನುದಾನಗಳು ಸಿಗುತ್ತದೆ.
ರುಡ್ ಸೆಟ್ ಸಂಸ್ಥೆಯಿಂದ ಅನೇಕ ಮಂದಿ ಸದಸ್ಯರು ತರಬೇತಿಯನ್ನು ಪಡೆದು ಸ್ವಂತ ಸ್ವದ್ಯೋಗಗಳನ್ನು ಮಾಡಿದ್ದಾರೆ. ಯೋಜನೆಯಲ್ಲಿ ಪೂಜ್ಯರು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿ ಸಮಾಜದ ಎಲ್ಲಾ ಸಮೂಹದವರೆಗೆ ಪ್ರೀತಿ ಪಾತ್ರರಾಗಿದ್ದಾರೆ. ಒಕ್ಕೂಟದ ಪದಾಧಿಕಾರಿಗಳಾದ ನೀವೆಲ್ಲಾ ಇನ್ನು ಕೂಡ ಯೋಜನೆಯ ಕಾರ್ಯಕ್ರಮಗಳನ್ನು ವಿಸ್ತರಣೆ ಮಾಡಿಕೊಂಡು ಹೋಗಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಡುಪಿ ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೇ ಗೌಡರವರು ಮಾತನಾಡುತ್ತ, ಕೊಟ್ಟು ತೆಗೆದುಕೊಳ್ಳುವ ಸಂಪ್ರದಾಯವನ್ನು ಗ್ರಾಮಾಭಿವೃದ್ಧಿ ಯೋಜನೆ ಕಲಿಸಿ ಕೊಟ್ಟಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ 800 ವರ್ಷಗಳ ಹಿಂದಿನ ಕಥೆಯನ್ನು, ಕ್ಷೇತ್ರದ ಹಿನ್ನಲೆಯನ್ನು ಪೂಜ್ಯರ ವರ್ಚಸ್ಸನ್ನು ವಿವರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಜವಾದ ಸೇವೆಯನ್ನು ಒಕ್ಕೂಟದ ಪದಾಧಿಕಾರಿಗಳು ಮಾಡುತ್ತಿದ್ದಾರೆ ನಮಗೆಲ್ಲ ಸೇವೆಯನ್ನು ಮಾಡಲು ನಮಗೆ ಅವಕಾಶ ಸಿಕ್ಕಿದೆ. ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ, ನಾಯಕತ್ವದ ಬಗ್ಗೆ ಮಾಹಿತಿಯನ್ನು ನೀಡಿ ಪ್ರೇರಣೆಯ ಮಾತುಗಳನ್ನು ಆಡಿದರು.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ-2 ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ಮಾತನಾಡುತ್ತ, ಒಕ್ಕೂಟದ ಉದ್ದೇಶದ ಬಗ್ಗೆ, ಸ್ವರೂಪದ ಬಗ್ಗೆ, ಸ್ವಸಹಾಯ ಸಂಘಗಳ ಪರಿಕಲ್ಪನೆ, ಸ್ವಸಹಾಯ ಸಂಘಗಳಿಂದ ಸದಸ್ಯರಿಗೆ ಆಗುವ ಪ್ರಯೋಜನಗಳು, ವಾರದ ಸಭೆಯ ಮಹತ್ವದ ಬಗ್ಗೆ, ಶಿಸ್ತುಬದ್ಧ ವ್ಯವಹಾರದಿಂದ ಆಗುವ ಅನುಕೂಲಗಳ ಬಗ್ಗೆ, ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಪ್ರತಿ ಸದಸ್ಯರ ಜವಾಬ್ದಾರಿಗಳ ಬಗ್ಗೆ, ಬಡ್ಡಿ ಲೆಕ್ಕಾಚಾರ ಮಾಡುವ ಬಗ್ಗೆ, ಸ್ವಸಹಾಯ ಸಂಘಕ್ಕೆ ನೀಡುವ ಮಾಸಿಕ ವರದಿಯ ಮಹತ್ವದ ಬಗ್ಗೆ, ಸಾಲದ ಮರುಪಾವತಿಯಲ್ಲಿ ಸಂಘ ಮತ್ತು ಸದಸ್ಯರ ಬದ್ಧತೆ ಹಾಗೂ ಒಟ್ಟು ಜವಾಬ್ದಾರಿಗಳ ಮಾಹಿತಿ ಇರಬೇಕು ಎಂದು ಮಾಹಿತಿ ಮಾರ್ಗದರ್ಶನವನ್ನು ನೀಡಿದರು.
SBI RACC ಮಲ್ಲಿಕಟ್ಟೆ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಭವಾನಿರವರು, ತೆಂಗಿನ ಹೂವನ್ನು ಅರಳಿಸಿ ಮಾತನಾಡುತ್ತ, ಸುಳ್ಯ ತಾಲೂಕಿನ ಜನತೆ ಪ್ರಾಮಾಣಿಕ ವ್ಯವಹಾರ ವನ್ನು ಮಾಡುತ್ತಿದ್ದು ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಒಪ್ಪಂದ ಮಾಡಿಕೊಂಡು ಸ್ವಸಹಾಯ ಸಂಘಗಳಿಗೆ ಸಾಲಗಳನ್ನು ಬ್ಯಾಂಕ್ ನಿಂದ ನೀಡುತ್ತಿದ್ದೇವೆ. RBI ಯು ಬ್ಯಾಂಕ್ ಗಳಿಗೆ ನಿಯಮವನ್ನು ಹೇಳುತ್ತದೆ. ಆ ಪ್ರಕಾರದಲ್ಲಿ ಬ್ಯಾಂಕ್ ನವರು ಸ್ವಸಹಾಯ ಸಂಘಗಳಿಗೆ ಸಾಲವನ್ನು ಒದಗಿಸಿಕೊಡುತ್ತಾರೆ ಎಂದು ಹೇಳಿದರು.
ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಸುರೇಶ್ ಕಣೆಮರಡ್ಕ ರವರು. ನಾವೆಲ್ಲರೂ ಧರ್ಮಸ್ಥಳ ಸಂಸ್ಥೆಯ ಸ್ವ-ಸಹಾಯ ಸಂಘಗಳಲ್ಲಿ ಇದ್ದು ಒಕ್ಕೂಟದ ಪದಾಧಿಕಾರಿಗಳಾಗಿ ಆಯ್ಕೆ ಆಗಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ. ಪ್ರತಿಯೊಬ್ಬರ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದೂ ತಿಳಿಸಿದರು
ಈ ಸಂದರ್ಭದಲ್ಲಿ ಸುಳ್ಯ SBI ಬ್ಯಾಂಕ್ ನ ಶಾಖ ವ್ಯವಸ್ಥಾಪಕರಾದ ಶ್ರೀ ಉತ್ಸವ್ ಚಕ್ರವರ್ತಿರವರು, ಸುಳ್ಯ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಲೋಕನಾಥ ಅಮೆಚೂರುರವರು, ಜಿಲ್ಲಾ MIS ಯೋಜನಾಧಿಕಾರಿಯವರಾದ ಶ್ರೀಮತಿ ಶಕುಂತಳಾರವರು ಉಪಸ್ಥಿತರಿದ್ದರು.
ತಾಲೂಕಿನ 9 ವಲಯದ 103 ಒಕ್ಕೂಟಗಳ ಎಲ್ಲಾ ವಲಯಗಳ ವಲಯಾಧ್ಯಕ್ಷರುಗಳು, ಒಕ್ಕೂಟಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ದಾಖಲಾತಿ ಸಮಿತಿ, ಉಪಸಮಿತಿಯ ಸದಸ್ಯರುಗಳು, ಎಲ್ಲಾ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ತಾಲೂಕು ವಿಚಕ್ಷಣಾಧಿಕಾರಿಗಳು, ಕಛೇರಿ ಪ್ರಭಂದಕರು, ಆಡಳಿತ ಸಹಾಯಕ ಪ್ರಬಂಧಕರು, ಕಛೇರಿ ಸಹಾಯಕ ಸಿಬ್ಬಂದಿಗಳು, ಜಿಲ್ಲಾ ಐಟಿ ಪ್ರಬಂಧಕರು, ಜಿಲ್ಲಾ ನೋಡೆಲ್ ಅಧಿಕಾರಿಗಳು, ಸೇವಾಪ್ರತಿನಿಧಿಯವರು,VLE ಗಳು, ಎಲ್ಲಾ ಸುವಿಧಾ ಸಹಾಯಕರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾಗಿದ್ದರು. ಸುಳ್ಯ ತಾಲೂಕಿನ ಯೋಜನಾಧಿಕಾರಿಯವರಾದ ಮಾಧವರವರು ಕಾರ್ಯಕ್ರಮದ ಉದ್ದೇಶದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸುಳ್ಯ ತಾಲೂಕಿನಲ್ಲಿ ವಿವಿಧ ಅನುದಾನಗಳ ಬಗ್ಗೆ ತಿಳಿಸಿದರು.
ಹಾಗೂ ಕಾರ್ಯಕ್ರಮದ ಧನ್ಯವಾದವನ್ನು ನೆರವೇರಿಸಿದರು
ಬೆಳ್ಳಾರೆ ವಲಯದ ಮೇಲ್ವಿಚಾರಕಿ ಶ್ರೀಮತಿ ವಿಶಾಲರವರು ಕಾರ್ಯನಿರೂಪಿಸಿದರು. ನಂತರ ಸಂಸ್ಥೆಯ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸೌಲಭ್ಯಗಳನ್ನು ನೀಡುವ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು ಮಾಡಿರುವ ಸಂದರ್ಶನ ಮತ್ತು ಸಂವಾದಗಳ ವಿಡಿಯೋವನ್ನು ಪ್ರದರ್ಶಿಸಲಾಯಿತು.
ಹಾಗೂ ತಾಲೂಕಿನ ಮಾದರಿ CSC ಕೇಂದ್ರಗಳ ವಿಡಿಯೋಗಳನ್ನು ಪ್ರದರ್ಶಿಸಲಾಯಿತು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top