ಹೆಚ್ಚುವರಿ ತರಗತಿಯಲ್ಲಿ ಶಿಕ್ಷಕಿಯ ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ವಿದ್ಯಾರ್ಥಿ !

ಆಗ್ರಾ: ಹಿಂದೆಲ್ಲ ಗುರುಗಳಿಗೆ ಸಮಾಜದಲ್ಲಿ ಉನ್ನತ ಗೌರವ ನೀಡಲಾಗುತ್ತಿತ್ತು.ಆದರೆ ಇಲ್ಲೊಂದು ಶಿಷ್ಯರ ತಂಡ ಶಿಕ್ಷಕಿಗೆ ಮಾಡಿದ್ದಾರು ಏನು ? ಇಂತಹ ಶಿಷ್ಯರಿದ್ದಾರೆ ಎಂದರೆ ನಿಮಗೆ ಅಚ್ಚರಿ ಆಗಬಹುದು.
ಶಾಲಾ ಶಿಕ್ಷಕಿಯ ಅಶ್ಲೀಲ ವಿಡಿಯೋ ಬಳಸಿ ಆಕೆಯನ್ನು ಬ್ಯ್ಲಾಕ್ ಮೇಲ್‌ ಮಾಡಿದ್ದಾರೆ. ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಈ ಆರೋಪದಡಿ ನಾಲ್ವರು ವಿದ್ಯಾರ್ಥಿಗಳನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ.
ಆಗ್ರಾದ ಶಿಕ್ಷಕಿ ಮಥುರಾದ ಶಾಲೆಯಲ್ಲಿ ಶಿಕ್ಷಕಿಯಾಗಿ ಪಾಠ ಮಾಡುತ್ತಿದ್ದರು.ಕಲಿಕೆಯಲ್ಲಿ ಹಿಂದಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಅವರು ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು.ವಿದ್ಯಾರ್ಥಿಯೊಬ್ಬ ಮತ್ತು ಶಿಕ್ಷಕಿ ಆತ್ಮೀಯರಾಗಿದ್ದರು. ವಿದ್ಯಾರ್ಥಿ ತನ್ನ ಮೊಬೈಲ್ ಫೋನ್‌ ನಿಂದ ಶಿಕ್ಷಕಿಯ ಅಶ್ಲೀಲ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ. ಅಲ್ಲದೆ ನಂತರ ತನ್ನೊಂದಿಗೆ ಶಾರೀರಿಕ ಸಂಬಂಧ ಬೆಳೆಸುವಂತೆ ಬೆದರಿಕೆಯೊಡ್ಡಿದ್ದಾನೆ.
ಶಿಕ್ಷಕಿ ಆತನ ಪೋನ್ ನಂಬರ್ ಬ್ಲಾಕ್ ಮಾಡಿ ಆತನಿಂದ ದೂರ ಉಳಿದ ಕಾರಣದಿಂದ ಅವನು ವಿಡಿಯೋವನ್ನು ಆತನ ಮಿತ್ರ ವಿದ್ಯಾರ್ಥಿಗಳಿಗೆ ಹಂಚಿದ್ದಾನೆ.ಅಲ್ಲದೆ ಇನ್ನು ಹಲವರಿಗೆ ವಿಡಿಯೋ ಕಳುಹಿಸಿದ್ದಾನೆ. ಇನ್ಸ್ಟಾಗ್ರಾಮ್‌ ನಲ್ಲಿ ಪೇಜ್‌ ಕೂಡಾ ಆರಂಭಿಸಿದ್ದಾರೆ.ಇದರಿಂದ ನೊಂದ ಶಿಕ್ಷಕಿಯು ಮಿಶನ್‌ ಶಕ್ತಿ ಅಭಿಯಾನ್‌ ಕೇಂದ್ರಕ್ಕೆ ತೆರಳಿ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು. ಕೇಂದ್ರದಲ್ಲಿ ಆಕೆಯನ್ನು ಸಂತೈಸಿದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top