ವಿಟ್ಲ: ರಕ್ಷಿತಾರಣ್ಯದಿಂದ ಹಾಲುಮಡ್ಡಿ ಸಂಗ್ರಹಿಸಿ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆಯವರು ಪತ್ತೆ ಹಚ್ಚಿ ವಸ್ತು ಸಹಿತ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಕೆದಿಲ ನಿವಾಸಿಗಳಾದ ಅಲಿ ಹೈದರ್, ಉಮ್ಮರ್ ಪಾರೂಕ್, ಮಹಮ್ಮದ್ ಹಸೈನರ, ಉಮ್ಮರ್ ಫಾರೂಕ್ ಅವರನ್ನು ಚಂದಳಿಕೆಯಲ್ಲಿ ಬಂಧಿಸಲಾಗಿದೆ.
ಆರೋಪಿಗಳು ಕಳಂಜಿ ಮಲೆ ರಕ್ಷಿತಾರಣ್ಯದಲ್ಲಿ ಹಾಲು ಮಡ್ಡಿ ತೆಗೆವ ಅಕ್ರಮಬಾಗಿ ಹಾಲು ಮಡ್ಡಿ ತೆಗೆದು ಸಾಗಾಟ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ. 11 ಕೆಜಿ ಹಾಲುಮಡ್ಡಿ. ಮೇಣ ತೆಗೆಯಲು ಬಳಸಿದ ಸಲಕರಣೆ, ರಿಕ್ಷಾವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.