ಹರಿಯಾಣ ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಬಾರಿ ಬಹುಮತವನ್ನು ಸಾಧಿಸಿದ್ದು ಸುಳ್ಯ ನಗರ ಮಹಾ ಶಕ್ತಿ ಕೇಂದ್ರ ವತಿಯಿಂದ ಸುಳ್ಯ ಹಳೆ ಬಸ್ಸು ನಿಲ್ದಾಣದ ಬಳಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ನ.ಪಂ ಅಧ್ಯಕ್ಷೆ ಶಶಿಕಲಾ ನೀರಬಿದರೆ, ಸುಳ್ಯ ಮಹಾನಗರ ಶಕ್ತಿ ಕೇಂದ್ರದ ಅಧ್ಯಕ್ಷ ಎ ಟಿ ಕುಸುಮಾಧರ, ಕಾರ್ಯದರ್ಶಿ ನಾರಾಯಣ ಎಂ ಎಸ್ ಶಾಂತಿನಗರ, ನ.ಪಂ.ಉಪಾಧ್ಯಕ್ಷ ಬುದ್ಧ ನಾಯ್ಕ, ರಮೇಶ್ ಇರಂತಮಜಲು, ಜಿನ್ನಪ್ಪ ಪೂಜಾರಿ, ಸುರೇಂದ್ರ, ಶೀಲಾ ಕುರುಂಜಿ, ಶೀನಪ್ಪ, ಕೇಶವ ಮಾಸ್ತರ್, ದಾಮೋದರ ಮಂಚಿ, ಶಿಲ್ಪ ಸುದೇವ್, ಜಿನ್ನಪ್ಪ ಪೂಜಾರಿ ,ನವೀನ್ ಕುದ್ರಾಜೆ, ಶೇಖರ ಮಡ್ತಿಲ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ ಮತ್ತು ಇತರರು ಉಪಸ್ಥಿತರಿದ್ದರು.
.