ಸುಳ್ಯ : ರಾಜ್ಯ ಸರಕಾರದಿಂದ ಅಕ್ರಮ ಪಡಿತರ ಚೀಟಿ ರದ್ದತಿಗೆ ಕ್ರಮವಹಿಸಲಾಗುತ್ತಿದ್ದು ನಕಲಿ ಮತ್ತು ಪಡಿತರ ಚೀಟಿಯಲ್ಲಿ ಬಳಕೆದಾರರ ಹೊಸ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಸುಳ್ಯದಲ್ಲಿ ಸುಮಾರು 2998 ಕುಟುಂಬಗಳ ಪಡಿತರ ಚೀಟಿ ಪರಿಶೀಲನೆಗೆ ಒಳಪಡಲಿದೆ ಸರಕಾರದಿಂದ ತನಿಖೆಗೆ ವಿಶೇಷ ತಂಡ ಆಗಮಿಸಿ ಪರಿಶೀಲನೆ ನಡೆಸಲಿದ್ದು ಈಗಾಗಲೇ ಅಸಮರ್ಕ ಮಾಹಿತಿ ಹಿನ್ನಲೆಯಿಂದ 42 ಬಿಪಿಎಲ್ ಕುಟುಂಬಗಳ ರೇಷನ್ ಕಾರ್ಡ್ ರದ್ದುಗೊಂಡಿದೆ ಎಂದು ತಿಳಿದು ಬಂದಿದೆ.
ಸುಳ್ಯ ತಾಲೂಕಿನಲ್ಲಿ 16 ಸಾವಿರಕ್ಕಿಂತ ಹೆಚ್ಚಿನ ಬಿಪಿಎಲ್ ಪಡಿತರ ಚೀಟಿ ಇದ್ದು ಇದರಲ್ಲಿ ನಕಲಿ ಹಾಗೂ ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಪಡೆದಿರುವ ಬಗ್ಗೆ ಸರಕಾರವು ಪತ್ತೆಮಾಡಿದೆ. ಇದೀಗ ಸರಕಾರ ನೀಡಿರುವ 2998 ಕುಟುಂಬಗಳ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಲಿದೆ. ಅಲ್ಲದೇ ಸುಮಾರು 6 ತಿಂಗಳುಗಳಿಂದ ಪಡಿತರ ಅಕ್ಕಿ ಪಡೆಯದೇ ಇರುವ ಸುಮಾರು 126 ಚೀಟಿಗಳು ರದ್ದಾಗಿದೆ. ಅಲ್ಲದೇ ಸುಳ್ಯ ತಾಲೂಕಿನಲ್ಲಿ ಸುಮಾರು 1382 ಅಂತ್ಯೋದೋಯ ಪಡಿತರ ಚೀಟಿ ಇವೆ. ಅಲ್ಲದೇ ಕೆಲವು ಕಾರ್ಡ್ ಗಳು ಕೆ ವೈ ಸಿ ಮತ್ತು ಆಧಾರ್ ಲಿಂಕ್ ಬ್ಯಾಂಕ್ ಗಳಿಗೆ ಮಾಡದೇ ಇದ್ದಲ್ಲಿ ಪಡಿತರ ಅಕ್ಕಿಯ ಹಣ ಜಮೆಯಾಗಿಲ್ಲ. ಸುಳ್ಯ ತಾಲೂಕಿನಲ್ಲಿ ಇದೀಗ ಅಸಮರ್ಪಕ ಮಾಹಿತಿ ಕಂಡುಬಂದ ಹಿನ್ನೆಲೆಯಲ್ಲಿ 42 ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗಿದೆ. ಐವರ್ನಾಡು 6, ಮರ್ಕಂಜ 3, ಸುಳ್ಯ ನಗರ 9, ಅಮರ ಮುಡ್ನೂರು 5,, ಉಬರಡ್ಕ 1, ಜಾಲ್ಲೂರು 5, ಮಂಡೆಕೋಲು 4, ದೇವಚಳ್ಳ 2, ನೆಲ್ಲೂರು ಕೆಮ್ರಾಜೆ, ಕಲ್ಮಡ್ಕ, ಬೆಳ್ಳಾರೆ, ಪೆರುವಾಜೆ, ಕಳಂಜ, ಗುತ್ತಿಗಾರು, ಹರಿಹರ ಗ್ರಾಮಗಳಲ್ಲಿ ಒಂದು ಕಾರ್ಡ್ ಗಳಂತೆ ಒಟ್ಟಾರೆಯಾಗಿ 42 ಪಡಿತರ ಚೀಟಿ ರದ್ದಾಗಿವೆ.
ಈ ನಡುವೆ ದಂಡ ಕಟ್ಟಿ ಆಧಾರ್ ಪಾನ್ ಲಿಂಕ್ ಎಡವಟ್ಟಿನಿಂದ. ಬಡತನ ರೇಖೆಗಿಂತ ಕೆಳಗಿರುವ ಕೆಲವು ಕುಟುಂಬ ತೆರಿಗೆ ಪಾವತಿದಾರರ ಸಾಲಿಗೆ ಸೇರಿದ್ದು ಅಂತಹ ಕುಟುಂಬಗಳು ಬಿಪಿಲ್ ಕಾಡ್೯ ನಿಂದ ಹೊರಬರುವ ಮಾತ್ರವಲ್ಲ ಸರಕಾರದ ಯಾವುದೇ ಸವಲತ್ತುಗಳನ್ನು ಪಡೆಯಲು ಅನರ್ಹತೆ ಹೊಂದುವ ಆತಂಕದಲ್ಲಿ ಎದುರಾಗಿದೆ.