ಖಾಸಗಿ ಬಸ್ಸೊಂದು ಚಾಲಕನ
ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಮೃತ ಪಟ್ಘಟನೆ ಶುಕ್ರವಾರ ತಡ ರಾತ್ರಿ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ನಡೆದಿದೆ. ಅಪಘಾತದ ಸಂದರ್ಭ ಬಸ್ಸಿನಲ್ಲಿ ಚಾಲಕ ಹಾಗೂ ನಿರ್ವಾಹಕ ಮಾತ್ರವಿದ್ದರು. ಹೀಗಾಗಿ ಭಾರೀ ದುರಂತವೊಂದು ಸಂಭವಿಸುವುದು ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ 11 ಗಂಟೆಗೆ ಅಪಘಾತ ಸಂಭವಿಸಿದ್ದು, ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಬ್ರಹಣ್ಯ ನಾಮಫಲಕ ಹೊಂದಿದ ಈ ಖಾಸಗಿ ಸ್ವೀಪರ್ ಬಸ್ಸು ಲಾವತ್ತಡ್ಕ ಬಳಿ ಕಂದಕಕಕ್ಕೆ ಉರುಳಿ ಗುಂಡ್ಯ ಹೊಳೆಗೆ ಬಿದ್ದಿದೆ.
ಘಟನೆಯಿಂದ ಚಾಲಕ ಭರತ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಚಾಲಕ ಬೆಂಗಳೂರು ಮೂಲದವರು, ಬಸ್ಸಿನ ಮಾಲಕರು ಕೂಡ ಬೆಂಗಳೂರಿನವರೆಂಬ ಪ್ರಾಥಮಿಕ ಮಾಹಿತಿ ಲಭಿಸಿದೆ.
ಮೂಲಗಳ ಪ್ರಕಾರ, ಈ ಖಾಸಗಿ ಬಸ್ ಗುರುವಾರ ಬೆಂಗಳೂರಿನಿಂದ ಹೊರಟ್ಟಿದ್ದು, ಶುಕ್ರವಾರ ಪ್ರಯಾಣಿಕರನ್ನು ಗೋಕರ್ಣದಲ್ಲಿ ಇಳಿಸಿದೆ. ಬಳಿಕ ಶುಕ್ರವಾರ ಸಂಜೆ ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯದತ್ತ ಹೊರಟಿತ್ತು. ಈ ವೇಳೆ ಬಸ್ಸಿನಲ್ಲಿ ಡ್ರೈವರ್ ಮತ್ತು ನಿರ್ವಾಹಕ ಮಾತ್ರ ಇದ್ದರು. ಮಾರ್ಗ ಮಧ್ಯೆ ಅದು ಅಪಘಾತಕ್ಕಿಡಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದು ಬೆಂಗಳೂರಿಗೆ ತೆರಳಲಿರುವ ಪ್ರಯಾಣಿಕರನ್ನು ಪಿಕ್ ಅಪ್ ಮಾಡಲಿತ್ತು ಎನ್ನಲಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ https://youtu.be/60qexythFv4?si=s92x9Z1Sp09bzqH9