ಸುಳ್ಯದ ಕವಿ, ಸಾಹಿತಿ, ಗಾಯಕ, ಜ್ಯೋತಿಷಿಯಾಗಿರುವ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಅವರು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಮತ್ತು ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿಗಳಲ್ಲಿ ತಮ್ಮ ಸ್ವರಚಿತ ಎರಡು ಮರಾಠಿ ಕವನಗಳನ್ನು ವಾಚನ ಮಾಡಿರುತ್ತಾರೆ. ಅ. 9 ರಂದು ಬೃಹತ್ತಾದ ಭವ್ಯ ಗಾಂಧಿ ಮಂಟಪದ ವೇದಿಕೆಯಲ್ಲಿ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಟಿ ಸಮಾರಂಭದಲ್ಲಿ “ಜಗಾತ್ಲ ತೋರ್ಲ ದೇವ್ ಕೃಷ್ಣಾ” ಕವನ ವಾಚಿಸಿದರು. ಅ. 11 ರಂದು ಗೋಣಿಕೊಪ್ಪದ ಶ್ರೀ ಕಾವೇರಿ ದಸರಾ ಸಮಿತಿ ಆಯೋಜಿಸಿದ್ದ ದಸರಾ ಬಹುಭಾಷಾ ಕವಿಗೋಷ್ಟಿಯಲ್ಲಿ “ಮ್ಹಾಗಲ ಕಾಲ್ ಕವಾ ಏಯಲ್ ” ಎಂಬ ಮರಾಠಿ ಕವನಗಳನ್ನು ವಾಚನ ಮಾಡಿರುತ್ತಾರೆ. ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಗಾಯಕ, ಚಿತ್ರ ನಿರ್ದೇಶಕ, ಸಂಘಟಕರಾದ ಎಚ್. ಭೀಮರಾವ್ ವಾಷ್ಠರ್ ರವರು ಸತತವಾಗಿ 13 ವರ್ಷಗಳಿಂದಲೂ ಮರಾಠಿ ಭಾಷಾ ಕವನವನ್ನು ವಾಚನ ಮಾಡಿದ ಹೆಗ್ಗಳಿಕೆ ಇವರದಾಗಿದೆ. ವಾಷ್ಠರ್ ಅವರಿಗೆ ಸಮ್ಮಾನಿಸಿ ಪ್ರಮಾಣ ಪತ್ರದ ಜೊತೆ ಆಕರ್ಷಕ ಶಾರದಾ ಮೂರ್ತಿ ಮತ್ತು ದಸರಾ ಕವಿಗಳ ಕವನಗಳುಳ್ಳ ಕಾವ್ಯದ್ಯಾನ ಕೃತಿಯ ಜೊತೆ ಗೌರವಧನ ನೀಡಿ ಸತ್ಕಾರಿಸಿದ್ದಾರೆ.