ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳ ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗಿದೆ. ಕಳ್ಳ ಮಾರ್ಗದಿಂದ BPL ಕಾರ್ಡ್ ಪಡೆದುಕೊಂಡಿದ್ದರೆ ರದ್ದಾಗುತ್ತದೆ. ಈ ನಡುವೆ ಆಹಾರ ಸಚಿವ ವಿ.ಮುನಿಯಪ್ಪ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ಕೋಲಾರದಲ್ಲಿ ಶುಕ್ರವಾರ ಮಾತನಾಡಿದ ಅವರು, BPL ಕಾರ್ಡ್ ರದ್ದಾದರೂ ಕೂಡ ಆ ಸದಸ್ಯರನ್ನ APL ಕಾರ್ಡ್‌ಗೆ ವರ್ಗಾಯಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೆ ಅನ್ನಭಾಗ್ಯ ಹಣ ಕೂಡ ವರ್ಗಾವಣೆಯಾಗುತ್ತದೆ ಸರ್ವರ್ ಸಮಸ್ಯೆಯಿಂದ ಹಣ ವರ್ಗಾವಣೆಯಲ್ಲಿ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.