ಮಡಿಕೇರಿ: ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಗೃಹಿಣಿಯೋರ್ವರು ವಿಷ ಸೇವಿಸಿ ಸಾವಿಗೀಡಾದ ಘಟನೆ ಗುಡ್ಡೆಹೊಸೂರು ಬಳಿಯ ರಸೂಲ್ ಪುರ ಗ್ರಾಮದಿಂದ ವರದಿಯಾಗಿದೆ.
ಇಲ್ಲಿಯ ಆಮೆಮನೆ ಬಾಲಕೃಷ್ಣ ಎಂಬವರ ಪುತ್ರ ರಾಜೇಶ್ ಎಂಬವರ ಪತ್ನಿ ತೇಜಸ್ವಿನಿ ಎಂಬಾಕೆಯೇ (30) ಮೃತ ಮಹಿಳೆ
ಕಳೆದ ನಾಲ್ಕು ದಿನಗಳ ಹಿಂದೆ ಸ್ವಗೃಹದಲ್ಲಿ ಕೌಟುಂಬಿಕ ಸಂಘರ್ಷದಿಂದ ಬೇಸತ್ತ ತೇಜಸ್ವಿನಿ ವಿಷ ಸೇವಿಸಿದ್ದರು ಎನ್ನಲಾಗಿದ್ದು, ಕೂಡಲೇ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಾಲ್ಕು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೇ ತೇಜಸ್ವಿನಿ ಮೃತಪಟ್ಟರು ಎನ್ನಲಾಗಿದೆ.