ಒಂದು ವೀಣೆಗೆ
ರಾಗ ನುಡ್ಸ್ ವ ತಂತಿಗ ಎಷ್ಟೋ
ಒಂದು ಹೃದಯಕೆ
ಕಾಯುವ ಮನ್ಸ್ ಎಷ್ಟೋ
ದೇವ ನಿನ್ನ ನಾಮ
ಜಪಿಸೋ ವಿಧಗಳೆಷ್ಟೋ
ಜಪಮಾಲೆನಾ ಎಣ್ಸಿ
ಸೋತ ಕೈ ಅದೆಷ್ಟೋ
ದೇವಾ ನಿಂಗೆ ನೀನೇ ಸಾಟಿ
ಹೆಸ್ರು ಹಲವು ನಿಂಗೆ
ನೂರೆಂಟು ಸಲ ಕೈಮುಗ್ದರೂ
ನಮನವೊಂದೇ ದೇವ
ಭಕ್ತಿಲಿ ಬೇಡ್ನೆ ಕರುಣೆ ತೋರ್
ಕಡಲ ಅಲೆಗೆ ಭಾವ ಎಲ್ಲಿ
ಹಟವೊಂದೇ ಅದ್ಕೆ
ದಡಕೆ ಬಂದು ತಾಂಗಿ
ಕಡ್ಲ್ ಸೇರೋ ಅಂಬೆರ್ಪ್
ಸದ್ದಿಲ್ಲದೆ ನಿಂತ ದಡ
ನೀನ್ನಾಂಗೆ ದೇವ
ದಿನ ನಿನ್ನ ಭಜನೆಮಾಡ್ನೆ ಶುದ್ಧಭಕ್ತಿಲಿ
ನಿತ್ಯ ನೇಮಕೊಲಿವೆ ನೀ ವರದಹಸ್ತನೆ
ಸ್ವಾರ್ಥ ಇರದ ಮನ್ಸಿಗೆ ತಾನೆ
ಎಲ್ಲಾ ಕೊಡೊವ ನೀನೆ
ದೇವ ನಿನ್ನ ಸನ್ನಿಧಿಲಿ
ಮುಕ್ತಿ ಬೇಡೊ ಮನ್ಸ್ ನಾ
ಒಮ್ಮೆ ದೃಷ್ಟಿ ಇಸಿ ನೋಡ್
ಓ ದೇವ ಶರಣಾನೇ...
ಶಾಂತಿ ನೀಡ್ ಕಾಪಾಡ್
*ವಿಮಲಾರುಣ ಪಡ್ಡoಬೈಲ್*