ಕುಕ್ಕೆ ಸುಬ್ರಹ್ಮಣ್ಯದ ಪರಿಸರದಲ್ಲಿ ಭಾನುವಾರ ಭಾರೀ ಸುರಿದಿರುವ ಬಗ್ಗೆ ವರದಿಯಾಗಿದೆ.
ಮಳೆ ನೀರು ತುಂಬಿ ಹರಿದಿದ ಪರಿಣಾಮ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಹೊರ ಭಾಗಕ್ಕೆ ನೀರು ಆವರಿಸಿದೆ. ಆದಿ ಸುಬ್ರಹ್ಮಣ್ಯ ದ ಕೆಲ ಅಂಗಡಿಗೆ ನೀರು ನುಗ್ಗಿರುವುದಾಗಿ ತಿಳಿದು ಬಂದಿದೆ. ಸುತ್ತಮುತ್ತಲಿನ ತೋಟಕ್ಕೂ ನೀರು ನುಗ್ಗಿ ಹಾನಿ ಉಂಟಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.