ಹಾವೇರಿ: ಮಗ ಮೃತಪಟ್ಟ ಸುದ್ದಿ ಕೇಳಿ ತಂದೆಯೂ ಹೃದಯಾಘಾತದಿಂದ
ಮೃತಪಟ್ಟ ಘಟನೆ ಹಾವೇರಿಯ ಬಸವೇಶ್ವರ ನಗರದಿಂದ ವರದಿಯಾಗಿದೆ.
ತಂದೆ ಡಾ.ವೀರಭದ್ರಪ್ಪ ಗುಂಡಗಾವಿ, ಮಗ ಡಾ.ವಿನಯ ಗುಂಡಗಾವಿ ಮೃತ ದುರ್ದೈವಿಗಳು.
ವೃತ್ತಿಯಲ್ಲಿ ತಂದೆ, ಮಗ ಇಬ್ಬರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಆಕಸ್ಮಿಕವಾಗಿ ವಿನಯ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ .ಈ ವಿಚಾರ ಕೇಳಿ ತಂದೆ ವೀರಭದ್ರಪ್ಪ ಅವರೂ ಕೂಡ ಹೃದಯಾಘಾತಕ್ಕೆ ಒಳಗಾಗಿ ಒಂದೇ ದಿನ ತಂದೆ ಮಗ ಮೃತಪಟ್ಟಿದ್ದಾರೆ.
ಇಬ್ಬರ ಸಾವಿನಿಂದ ನೊಂದ ಕುಟುಂಬದಲ್ಲಿ ದು:ಖ ಮಡುಗಟದಟ್ಟಿದೆ.