ಎಮಿರೇಟ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಅರಂತೋಡು ಇದರ ವತಿಯಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿವರನ್ನು ಅ.20 ರಂದು ನಡೆದ ಕ್ರಿಕೆಟ್ ಪಂದ್ಯಾಟದ ಸಮರೋಪ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆಯವರು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂಧರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ನಿವೃತ್ತ ದೈಹಿಕ ಶಿಕ್ಷಕ ಎ.ಸಿ ವಸಂತ, ಪ್ರಗತಿಪರ ಕೃಷಿಕರು ತೀರ್ಥರಾಮ ಪರ್ನೋಜಿ ಉಳುವಾರು, ಅಶ್ರಪ್ ಗುಂಡಿ, ಸಿದ್ಧೀಕ್ ಕೊಕ್ಕೊ, ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಎಮಿರೇಟ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಮನ್ಸೂರ್ ಪಾರೆಕ್ಕಲ್, ಸಂಚಾಲಕ ಅಬ್ದುಲ್ ಮಜೀದ್, ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್, ಹಬೀಬ್ ಗುಂಡಿ, ಜಾವೇದ್ ಪೆಲ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.