ಪಿಎಂ ಇಂಟರ್ನ್‌ಶಿಪ್ ಯೋಜನೆಯಲ್ಲಿ ಈವರೆಗೆ 280 ಕಂಪನಿಗಳು ನೊಂದಣಿ ಮಾಡಿಕೊಂಡಿವೆ. ಇದೀಗ ಸ್ಕಿಮ್ ನ ಪೋರ್ಟಲ್‌ನಲ್ಲಿ ಕಂಪನಿಗಳ ನೊಂದಣಿ ನಿಲ್ಲಿಸಲಾಗಿದೆ. ಆದರೆ, ಯುವಜನರು ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸುವುದನ್ನು ಮುಂದುವರಿಸಬಹುದು. 21ರಿಂದ 24 ವರ್ಷದೊಳಗಿನ ವಯಸ್ಸಿನ ಯುವಕ ಮತ್ತು ಯುವತಿಯರು ಇಂಟರ್ನ್ ಶಿಪ್ ಪಡೆಯಬಹುದು.ಒಂದು ವರ್ಷದ ಇಂಟರ್ನ್ ಶಿಪ್ ಅವಕಾಶ ಕೊಡುವ ಈ ಸ್ಕಿಮ್‌ನಲ್ಲಿ ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಗೂ ವರ್ಷಕ್ಕೆ 66,000 ರೂವರೆಗೆ ಧನಸಹಾಯ ಸಿಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ ಮಾಸಿಕವಾಗಿ 4,500 ರೂ. ಹಣವನ್ನು ಸ್ಟೈಪೆಂಡ್ ಆಗಿ ನೀಡುತ್ತದೆ.