ದೇಶಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲು ತಯಾರಿ ನಡೆಯುತ್ತಿದೆ.ಎಲ್ಲೆಲ್ಲೂ ಸಂಭ್ರಮ ಮನೆಮಾಡಿದೆ. ಹಿಂದುಗಳ ಅತಿದೊಡ್ಡ ಹಬ್ಬಕ್ಕೆ ಎಲ್ಲ ರೀತಿಯ ತಯಾರಿಗಳು ನಡೆಯುತ್ತಿವೆ. ದೇಶದೆಲ್ಲಡೆ ಬೆಳಕಿನ ಹಬ್ಬವನ್ನು ಬಹು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಾಲೆಗಳಿಗೆ ದೀಪಾವಳಿ ಹಬ್ಬದ ರಜೆಯನ್ನು ನೀಡಲಾಗಿದೆ. ನವೆಂಬರ್ ೧ ಶುಕ್ರವಾರ, ನವೆಂಬರ್ ೨ ಶನಿವಾರ, ಸೇರಿದಂತೆ ಒಟ್ಟು ಎರಡು ದಿನಗಳ ರಜೆಯನ್ನು ನೀಡಲಾಗಿದೆ. ನ.೩ ಭಾನುವಾರ ಆದ್ದರಿಂದ ೩ ದಿನಗಳ ರಜೆ ಲಭ್ಯವಾಗಲಿದೆ.