ಸುಳ್ಯ: ವಿಧಾನ ಪರಿಷತ್ ಉಪಚುನಾವಣೆಯ ನೀತಿಸಂಹಿತೆಯಿಂದ ಕೆಲವು ಸಮಯದಿಂದ ಸಾರ್ವಜನಿಕ ಭೇಟಿಗೆ ಲಭ್ಯರಿಲ್ಲದ ಶಾಸಕಿ ಭಾಗೀರಥಿ ಮುರುಳ್ಯ ಅವರು ಅ.28ರಿಂದ ಕಚೇರಿಯಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಿರುತ್ತಾರೆ. ಶಾಸಕರು ಪ್ರತಿ ಸೋಮವಾರ ಸುಳ್ಯ ತಾಲೂಕು ಪಂಚಾಯತ್ ಕಛೇರಿಯಲ್ಲಿ ಮತ್ತು ಪ್ರತಿ ಮಂಗಳವಾರ ಕಡಬ bತಾಲ್ಲೂಕು ಕಛೇರಿಯಲ್ಲಿ 10.30ರಿಂದ 2.30ರ ತನಕ ಲಭ್ಯರಿದ್ದಾರೆ ಎಂದು ಶಾಸಕರ ಕಛೇರಿಯ ಪ್ರಕಟಣೆ ತಿಳಿಸಿದೆ.