ನಾಳೆ ಪವರ್ ಕಟ್,ವಾರದಲ್ಲಿ ಎರಡು ದಿನ ಪವರ್ ಕಟ್ ಗೆ ವಿದ್ಯುತ್ ಬಳಕೆದಾರರ ಆಕ್ರೋಶ

ಸುಳ್ಯ:33 ಕೆ.ವಿ ಕಾವು-ಸುಳ್ಯ ಏಕ ಪಥ ಮಾರ್ಗವನ್ನು ಕೌಡಿಚ್ಚಾರಿನಿಂದ ಕಾವು ಜಂಕ್ಷನ್ ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿ ಅ.29 ರಂದು ನಡೆಸುವುದರಿಂದ ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 5:00 ಗಂಟೆವರೆಗೆ 33/11 ಕೆ.ವಿ ಕಾವು ಹಾಗೂ
ಸುಳ್ಯ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಇದೀಗ ಕಳೆದ ಕೆಲವು ವಾರಗಳಲ್ಲಿ ವಾರದಲ್ಲಿ ಎರಡು ದಿನ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಇದರಿಂದ ಈ ಭಾಗದ ವಿದ್ಯುತ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು ಒಂದು ತಿಂಗಳಿಂದ ಕೆಲವು ವಾರಗಳಲ್ಲಿ ಮಂಗಳವಾರ ಹಾಗೂ ಶನಿವಾರ ದಿನಪೂರ್ತಿ ವಿದ್ಯುತ್ ಕಡಿತ ಆಗುತ್ತದೆ. ಒಂದು ದಿನ 33 ಕೆವಿ ಲೈನ್ ದುರಸ್ತಿಗೆ ಹಾಗೂ ಇನ್ನೊಂದು ದಿನ 11 ಕೆವಿ ನಿಯತಕಾಲಿಕ ನಿರ್ವಹಣೆಗೆಂದು ದಿನಪೂರ್ತಿ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಸುಳ್ಯದಲ್ಲಿ ಅಧಿಕೃತವಾಗಿ ಘೋಷಿಸಿ ವಾರದಲ್ಲಿ ಎರಡು ದಿನ ವಿದ್ಯುತ್ ಕಡಿತ ಮಾಡಿದರೆ ಅನಧಿಕೃತವಾಗಿ ಹಲವು ಬಾರಿ ವಿದ್ಯುತ್ ಕಡಿತ ಆಗುತ್ತಿದೆ ಎಂದು ಗ್ರಾಹಕರು ಮಾದ್ಯಮದೊಂದಿಗೆ ದೂರಿಕೊಂಡಿದ್ದಾರೆ.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top