ಹಣದ ವ್ಯಾಮೋಹಕ್ಕೆ ಒಳಗಾಗಿ ಪ್ರಿಯಕರನ ಜೊತೆ ಸೇರಿ ತನ್ನ ಮೂರನೇ ಪತಿಯನ್ನು ಭೀಕರವಾಗಿ ಕೊಲೆ ಮಾಡಿ ಸುಟ್ಟು ಹಾಕಿರುವ ಘಟನೆ ರಾಜ್ಯದಲ್ಲಿ ನಡೆದಿದೆ. ಹೈದರಾಬಾದಿನಲ್ಲಿ ಆತನನ್ನು ಕೊಂದು ಶವವನ್ನು ಕರ್ನಾಟಕದ ಕೊಡುಗು ಜಿಲ್ಲೆಯ ಸುಂಟಿಕೊಪ್ಪ ಪ್ರದೇಶಕ್ಕೆ ಕೊಂಡೊಯ್ದು ಅಲ್ಲಿನ ಕಾಫಿ ತೋಟದಲ್ಲಿ ಮೃತದೇಹವನ್ನು ಕತ್ತರಿಸಿ ಸುಟ್ಟು ಹಾಕಿದ್ದಾರೆ. ಮೃತನನ್ನು ರಮೇಶ್ ಎಂದು ಗುರುತಿಸಲಾಗಿದೆ. ರಮೇಶ್ ಕುಮಾರ್ ಹೆಸರಿನಲ್ಲಿದ್ದ 8 ಕೋಟಿ ಮೌಲ್ಯದ ಆಸ್ತಿಯನ್ನು ಕಬಳಿಸುವುದಕ್ಕೆ ಕೊಲೆ ಮಾಡಿರುವುದಾಗಿ ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಆರೋಪಿಯನ್ನು ನಿಹಾರಿಕಾ ಎಂದು ಗುರುತಿಸಲಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.